RCEP ಒಪ್ಪಂದ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ

0
333

ನ್ಯೂಸ್ ಕನ್ನಡ ವರದಿ: ಚೀನಾ ಈಗ ಆಕ್ರಮಣಕಾರಿ ಹೆಜ್ಜೆಗಳನ್ನು ಇಡತೊಡಗಿದೆ. ಆರ್‌ಸಿಇಪಿ ವ್ಯಾಪಾರಿ ಪಾಲುದಾರಿಕಾ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದೆ. ಅದರಂತೆ ಮೋದಿ ನೇತೃತ್ವದ ಭಾರತದ ಕೇಂದ್ರ ಸರಕಾರ ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದೆ. ಈ ಒಪ್ಪಂದದಿಂದ ಭಾರತಕ್ಕೆ ಇದರಿಂದ ಭಾರೀ ಲಾಭವಾಗುತ್ತದೆ, ಚೀನಾದೊಂದಿಗೆ ಇರುವ ವ್ಯಾಪಾರ ಕೊರತೆಯನ್ನು ಇದರಿಂದ ಸರಿಪಡಿಸಬಹುದು ಎಂದೆಲ್ಲಾ ಬೊಗಳೆ ಬಿಡಲಾಗುತ್ತಿದೆ. ಈ ಒಪ್ಪಂದದಿಂದ ಗರಿಷ್ಠವಾಗಿ ಚೀನಾಕ್ಕೆ ಲಾಭದಾಯಕವಾಗುತ್ತದೆಯೇ ಹೊರತು ಭಾರತಕ್ಕಲ್ಲ ಎನ್ನುವುದನ್ನು ಸರಕಾರ ಜಾಣತನದಿಂದ ಮರೆಮಾಚುತ್ತಿದೆ.

ಯಾಕೆ RCEP ನ ಬಲವಾಗಿ ವಿರೋಧಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸುತ್ತಿರುವ ನೆಟ್ಟಿಗರು ಸಾಲು ಸಾಲು ಉತ್ತರವನ್ನು ಮುಂದಿಟ್ಟಿದ್ದಾರೆ;

  1. RCEP ಕಾರಣವಾಗಿ, ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಸಂಪೂರ್ಣ ರದ್ದಾಗಲಿದೆ ಮತ್ತು ವಿದೇಶಗಳಿಂದ ಈ ಉತ್ಪನ್ನಗಳ ಆಮದು ಧಾರಾಕಾರವಾಗಿ ಹರಿದು ಬರಲಿದೆ.
  2. ಹೊರದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ತಂದು ಸುರಿಯಲಿವೆ. ವಿಶೇಷವಾಗಿ ಹೈನುಗಾರಿಗೆ ಮತ್ತು ಹಾಲಿನ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಹರಿದುಬರಲಿವೆ. ಇದರಿಂದಾಗಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಲಕ್ಷಾಂತರ ಬಡ ರೈತರು ಮುಖ್ಯವಾಗಿ ಹೆಣ್ಣುಮಕ್ಕಳ ಬದುಕು ಬೀದಿಗೆ ಬರಲಿದೆ.
  3. ಬೀಜ ತಯಾರಿಸುವ ಕಂಪನಿಗಳು “ ಇಂಟಲೆಕ್ಚುಅಲ್ ಪ್ರಾಪರ್ಟಿ ರೈಟ್ಸ್” (ಬೌದ್ಧಿಕ ಸ್ವಾಮ್ಯ ಹಕ್ಕು) ಮೂಲಕ ವಿಪರೀತ ಅಧಿಕಾರ ಹೊಂದಲಿವೆ. ರೈತರು ಈ ಬೀಜಗಳನ್ನು ಬಳಸಿದಾಗ, ವಿನಿಮಯ ಮಾಡಿಕೊಂಡಾಗ ತೀವ್ರ ಶಿಕ್ಷೆಗೆ ಗುರಿಯಾಗಲಿದ್ದಾರೆ, ಜೈಲಿಗೆ ಹೋಗಲಿದ್ದಾರೆ.
  4. ಮೋದಿ ನೇತೃತ್ವ ದ ಬಿಜೇಪಿ ಸರಕಾರ ಪಿಯೂಷ ಗೋಯಲ್ ಎಂಬ ಮೂರ್ಖನ ಮುಂದಾಳುತನದಲ್ಲಿ ಆಸಿಯಾನ್ ದೇಶಗಳಲ್ಲದೆಯೇ ಬೃಹತ್ ಆರ್ಥಿಕ ಸಾಮರ್ಥ್ಯದ ದೇಶಗಳಾದ ಚೈನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ , ದಕ್ಷಿಣ ಕೊರಿಯಾ ದೇಶಗಳೊಂಗಿದೆ ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲ ಮೇಲೆ ನಿಂತಿದೆ. ಬಹುತೇಕ ನವೆಂಬರ ಮೊದಲ ವಾರದಲ್ಲಿ ಈ ಒಪ್ಪಂದ ಜಾರಿಯಾಗಲಿದೆ ಆ ಮೂಲಕ ಕೃಷಿ, ಹೈನುಗಾರಿಕೆ ಮತ್ತು ಕೈಗಾರಿಕಾವಲಯ ದಲ್ಲಿ ಅಸಮತೋಲನ ಉಂಟಾಗಿ ಅರಾಜಕತೆ ತಾಂಡವವಾಡಲಿದೆ.
  5. ಈ ಒಪ್ಪಂದದ ಲೀಕ್ ಆಗಿರುವ ಸುದ್ದಿಗಳ ಪ್ರಕಾರ ವಿದೇಶಿ ಹೂಡಿಕೆದಾರರಿಗೆ ನಮ್ಮ ದೇಶದಲ್ಲಿ ಕೃಷಿ ಭೂಮಿ ಕೊಂಡಕೊಳ್ಳಲು ಮುಕ್ತ ಅವಕಾಶ ದೊರೆಯಲಿದೆ. ವಿದೇಶಿ ಕಾರ್ಪೊರೇಟ್ ಗಳಿೆಗೆ ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಕೃಷಿ ಉತ್ಪನ್ನ ಮತ್ತು ಸೇವೆಗಳನ್ನು ಬೇಕಾಬಿಟ್ಟಿಯಾಗಿ ಖರೀದಿಸಲು ಅವಕಾಶವಾಗಲಿದೆ.
  6. ಬೃಹತ್ ರಿಟೇಲ್ ವ್ಯಾಪಾರಸ್ಥರ ಬಳಿ ಅಪಾರ ಅಧಿಕಾರ ಕೇಂದ್ರೀಕೃತವಾಗಲಿದೆ ಇದರಿಂದಾಗಿ ನಮ್ಮ ಸಣ್ಣ ಪುಟ್ಟ ಚಿಲ್ಲರೆ ವ್ಯಾಪಾರಸ್ಥರು, ಬೀದಿ ಬದಿಯ ಅಂಗಡಿಗಳ ಮಾಲಿಕರು ನಾಶವಾಗಿ ಹೋಗಲಿದ್ದಾರೆ.
  7. ಅಕಸ್ಮಾತ್ ನಮ್ಮ ಸರಕಾರಗಳು ನಮ್ಮ ರೈತರ, ಕಾರ್ಮಿಕರ ಹಿತ ರಕ್ಷಿಸಲು ಮುಂದಾದಲ್ಲಿ ಹೈಕೋರ್ಟು, ಸುಪ್ರೀಂ ಕೋರ್ಟುಗಳನ್ನ ಬೈಪಾಸ್ ಮಾಡಿ ಖಾಸಗಿ ಮಧ್ಯಸ್ಥಿಕೆಯ ನ್ಯಾಯಮಂಡಳಿಗಳ (Private arbitration tribunal) ಮೂಲಕ Investor-State dispute settlement (ISDS) ವ್ಯವಸ್ಥೆ ಯ ಭಾಗವಾಗಿ ಜನರಿಂದ ಚುನಾಯಿತವಾದ ನಮ್ಮ ಸರಕಾರಗಳ ವಿರುದ್ಧ ಮೊಕದ್ದಮೆ ಹೂಡಲು ಬೃಹತ್ ವಿದೇಶಿ ಕಾರ್ಪೊರೇಟ್ ಸಾಧ್ಯವಾಗಲಿದೆ.
  8. RCEP ಸಂಧಾನ ಮಾತುಕತೆಯಲ್ಲಿ ಒಂದಿಷ್ಟೂ ಪಾರದರ್ಶಕತೆ ಇಲ್ಲ. ಈ ಸಂಧಾನದ ನಿಜ ಕರಡನ್ನ ಈ ಒಪ್ಪಂದದಿಂದಾಗಿ ತೊಂದರೆ ಅನುಭವಿಸಲಿರುವ ಪಕ್ಷಗಳಿಗೆ ಈವರೆಗೂ ನೀಡಲಾಗಿಲ್ಲ.

ಈಗಾಗಲೇ ಮೂರ್ಖ ಡಿಮಾನಿಟೈಸೇಶನ್, ಅಪ್ರಬದ್ಧ GST ವ್ಯವಸ್ಥೆ ಜಾರಿಗೆ ತಂದು ದೇಶದ ಬದುಕನ್ನ ನರಕ ಮಾಡಿರುವ ಜನ ನಮ್ಮ ರೈತರ, ಕೃಷಿ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆಯಲು ಮತ್ತೊಮ್ಮೆ ಮುಂದಾಗುತ್ತಿದಾರೆ. ಈ ದುಷ್ಟ ಯೋಚನೆ ವಿರೋಧಿಸುವುದು ನಮ್ಮ ಕರ್ತವ್ಯ.

#SayNoToRCEP

#NoRCEP ಎಂಬ ಹ್ಯಾಷ್ ಟ್ಯಾಗ್ ಮೂಲಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here