‘ಅತೃಪ್ತರು’ ಎಂಬ ಪದ ಬಳಕೆ ವಿರುದ್ಧ ಕೋರ್ಟ್ ಮೆಟ್ಟಲೇರಿದ ಶಾಸಕರ ಪತ್ನಿಯರು! ಇಲ್ಲಿದೆ ಡೀಟೇಲ್ಸ್

0
1134

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಕ್ಷಣಕ್ಷಣಕ್ಕೂ ಹೊಸ ತಿರುವು ಕಂಡುಬರುತ್ತಿದೆ. ಈ ಮದ್ಯೆ ಯಾರು ಯಾವಾಗ ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ.

ಕೆಲದಿನಗಳ ಹಿಂದೆ ರೆಬೆಲ್ ಶಾಸಕರು 10 ಮಂದಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೆ, ನಂತರ ಅವರಿಗೆ ಸಡ್ಡು ಹೊಡೆದು ಸ್ಪೀಕರ್ ಅವರೂ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ನಿನ್ನೆ ಮತ್ತೆ ಐದು ಜನ ಶಾಸಕರೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಇದೀಗ ಬಂದ ಸುದ್ದಿಯಂತೆ ಮೈತ್ರಿ ಸರ್ಕಾರದೊಳಗೆ ಅಸಮಾಧಾನ ಹೊಂದಿರುವ ಹಾಗೂ ರಾಜೀನಾಮೆ ನೀಡಿದ ಶಾಸಕರನ್ನು ಮಾಧ್ಯಮಗಳಲ್ಲಿ ‘ಅತೃಪ್ತರು’ ಎಂಬ ಪದ ಬಳಕೆಯಾಗುತ್ತಿದೆ. ಈ ಪದ ಬಳಕೆಯಿಂದ ಅವಮಾನವಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಶಾಸಕರ ಪತ್ನಿಯರು ಹೈಕೋರ್ಟ್​​ನಲ್ಲಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ಅತೃಪ್ತರು ಎಂಬ ಪದ ಬಳಕೆಯನ್ನು ನಿರ್ಬಂಧಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಕೋರಿಕೆ ಮಾಡಿಕೊಂಡಿದ್ದಾರೆ. ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ಈ ಅರ್ಜಿಯ ವಿಚಾರಣೆ ಬರುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here