ಪ್ರಮುಖ ಬ್ಯಾಂಕ್ ಗಳಿಗೆ ದಂಡ ವಿಧಿಸಿದ ಆರ್’ಬಿಐ: ಕಾರಣವೇನು ಗೊತ್ತೇ?

0
196

ನ್ಯೂಸ್ ಕನ್ನಡ ವರದಿ(14-2-2019)ಮುಂಬೈ:ಆರ್ ಬಿ ಐ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ ಕೆಲವು ಬ್ಯಾಂಕ್ ಗಳಿಗೆ ದಂಡವನ್ನು ವಿಧಿಸಿದ ಕುರಿತು ವರದಿಯಾಗಿದೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಎಚ್ ಡಿಎಫ್ ಸಿ, ಕೋಟಾಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಏಳು ಬ್ಯಾಂಕ್ ಗಳಿಗೆ ಆರ್ ಬಿಐ ದಂಡ ವಿಧಿಸಿದೆ. ದಂಡಗಳು ಆಯಾ ಬ್ಯಾಂಕ್ ಗಳ ನಿಯಮಗಳ ಉಲ್ಲಂಘನೆಯ ಪ್ರಮಾಣವನ್ನು ಅವಲಂಬಿಸಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ ಸೀಸಿ ಬ್ಯಾಂಕ್ ಗಳು ಆರ್ ಬಿಐ ನಿಧಿ ಬಳಕೆ, ಮೇಲ್ವಿಚಾರಣೆಯಲ್ಲಿ ವಂಚನೆ ಸೇರಿ ಹಲವು ನಿಯಮಗಳ ಉಲ್ಲಂಘನೆ ಮಾಡಿ ದಂಡ ವಿಧಿಸಿಕೊಂಡಿದೆ. ನಿಯಮಗಳ ಉಲ್ಲಂಘನೆಗಾಗಿ  ಆಂಧ್ರ ಬ್ಯಾಂಕ್ ಗೆ 1 ಕೋಟಿ ರೂ. ದಂಡ ವಿಧಿಸಲಾಗಿದೆ. ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ (ಕೆವೈಸಿ) ಮಾನದಂಡಗಳನ್ನು ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧ ಎಚ್ ಡಿಎಫ್ ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಕೋಟಾಕ್ ಮಹೀಂದ್ರಾ ಬ್ಯಾಂಕ್ಗಳಲ್ಲಿ 20 ಲಕ್ಷ ರೂ. ದಂಡ ಹಾಕಲಾಗಿದೆ.

ಈಗಾಗಲೇ ಬ್ಯಾಂಕುಗಳ ಕುರಿತಾಗಿ ಹಲವು ರೀತಿಯ ಊಹಾಪೋಹಾ ಗಳು, ಸಾರ್ವಜನಿಕರ ಖಾತೆಯಿಂದ ಹಲವು ಕಾರಣವೊಡ್ಡಿ ಹಣ ತನ್ನದಾಗಿಸುವ ಬ್ಯಾಂಕಿಂಗ್ ವ್ಯವಸ್ಥೆ ಬಗೆಗೆ ಅನುಮಾನಗಳಿರುವಾಗ ಇಂತಹ ದಂಡ ವಿಧಿಸುವ ಕೆಲಸ ಮಾಡಿ ಇನ್ನೆಷ್ಟು ಮೋಸ ಹೋಗಲಿದ್ದಾರೆ ಸಾರ್ವಜನಿಕರು ಎಂಬ ಮಾತು ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here