ಮತ್ತೆ ಸಾಮಾಜಿಕ ಜಾಲತಾಣದಾದ್ಯಂತ ಟ್ರೋಲ್ ಆಗುತ್ತಿರುವ ರಮ್ಯಾ; ಅಷ್ಟಕ್ಕೂ ರಮ್ಯಾ ಮಾಡಿದ ತಪ್ಪಾದರೂ ಏನು?

0
295

ನ್ಯೂಸ್ ಕನ್ನಡ ವರದಿ (22-1-2019): ನಟ ಅಂಬರೀಶ್​ ಅವರ ಅಂತಿಮ ದರ್ಶನ ಪಡೆಯಲು ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಆಗಮಿಸಲೇ ಇಲ್ಲ. ಇದಕ್ಕೆ ಎಲ್ಲ ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿರುವ ಬಾಡಿಗೆ ಮನೆಯನ್ನು ಅವರು ಮನೆ ಖಾಲಿ ಮಾಡಿದ್ದು ಹಲವು ಅನುಮಾನ ಹುಟ್ಟುಹಾಕಿತ್ತು. ಈ ವಿಚಾರದಲ್ಲಿ ಅವರು ಟ್ರೋಲ್​ ಆಗಿದ್ದರು. ಈಗ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಮಾಡಿದ ಟ್ವೀಟ್​ಗೆ ಅನೇಕರು ಕುಪಿತಗೊಂಡಿದ್ದಾರೆ.

ಧನುಷ್​ ನಟನೆಯ ‘ಮಾರಿ 2’ ಇತ್ತೀಚೆಗೆ ತೆರಕಂಡಿತ್ತು. ಈ ಸಿನಿಮಾದ ‘ರೌಡಿ ಬೇಬಿ’ ಹಾಡು ಬರೋಬ್ಬರಿ 10 ಕೋಟಿ ಬಾರಿ ವೀಕ್ಷಣೆ ಕಂಡಿತ್ತು. ಈ ಖುಷಿಯನ್ನು ಧನುಷ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು. “ರೌಡಿ ಬೇಬಿ…” ಹಾಡು ಕೇವಲ ಎರಡೇ ವಾರಗಳಲ್ಲಿ 100 ಮಿಲಿಯನ್​ ವೀಕ್ಷಣೆ ಕಂಡಿದೆ. ಎಲ್ಲರಿಗೂ ಧನ್ಯವಾದ” ಎಂದಿದ್ದರು ಅವರು​. ಇದನ್ನು ರಮ್ಯಾ ರಿಟ್ವೀಟ್​ ಮಾಡಿದ್ದರು ಅಷ್ಟೇ ಆಗಿದ್ದರೆ, ಎಲ್ಲರೂ ಸುಮ್ಮನಿರುತ್ತಿದ್ದರೇನೋ. ರಿಟ್ವೀಟ್​ ಮಾಡುವುದರ ಜೊತೆಗೆ “10 ಕೋಟಿ ವೀಕ್ಷಣೆಯಲ್ಲಿ ನನ್ನದೂ ಕೊಡುಗೆ ಇದೆ” ಎನ್ನುವ ಅರ್ಥ ಬರುವ ರೀತಿ ಬರೆದುಕೊಂಡಿದ್ದರು. ಹಾಡಿನ ಸಂಗೀತ ನಿರ್ದೇಶಕನ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದರು ರಮ್ಯಾ. ಅವರ ಈ ಹೇಳಿಕೆಯಿಂದ ಕುಪಿತಗೊಂಡ ಕನ್ನಡಾಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಾ ಇದ್ದಾರೆ.

ದರ್ಶನ್​ ನಟನೆಯ ‘ಯಜಮಾನ’ ಚಿತ್ರದ ಹಾಡುಗಳು ತೆರೆಕಾಣುತ್ತಿವೆ. ‘ಪೈಲ್ವಾನ್​’ ಚಿತ್ರದ ಟೀಸರ್​ ವೈರಲ್​ ಆಗಿದೆ. ಅಷ್ಟೇ ಏಕೆ, ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದೆ. ಕನ್ನಡ ಚಿತ್ರರಂಗದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿದ್ದರೂ, ಒಂದೇ ಒಂದು ಟ್ವೀಟ್​ ಮಾಡದ ರಮ್ಯಾ ಪರಭಾಷೆಯ ಸಿನಿಮಾದ ಹಾಡು 10 ಕೋಟಿ ಬಾರಿ ವೀಕ್ಷಣೆ ಕಂಡಿದ್ದಕ್ಕೆ ಭೇಷ್​ ಎಂದಿರುವುದು ಟ್ರೋಲ್​ ಆಗಲು ಮುಖ್ಯ ಕಾರಣ.

LEAVE A REPLY

Please enter your comment!
Please enter your name here