ಪರಮೇಶ್ವರ್​ ಪಿಎ ರಮೇಶ್​ ಬರೆದಿರುವ ಡೆತ್​ನೋಟ್​ನಲ್ಲಿತ್ತು ಆತಂಕಕಾರಿ ಸುದ್ದಿ..!?

0
3075

ನ್ಯೂಸ್ ಕನ್ನಡ ವರದಿ: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್​ ಆಪ್ತ ಸಹಾಯಕ ರಮೇಶ್ ಕುಮಾರ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಆತ್ಮಹತ್ಯೆಗೂ ಮುನ್ನ ರಮೇಶ್​ ಬರೆದಿದ್ದಾರೆ ಎನ್ನಲಾಗಿರುವ ಡೆತ್​ ನೋಟ್​ನಲ್ಲಿ ರಮೇಶ್​ ಕುಮಾರ್​ ಸಾವಿನ ಕಾರಣವನ್ನ ತಿಳಿಸಿದ್ದಾರೆ. ಡೆತ್​ ನೋಟ್​ ಮಾಧ್ಯಮಗಳಿಗೆ ದೊರೆತಿದೆ.

ಎಲ್ಲರಿಗೂ ನಮಸ್ಕಾರ..

ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ನನಗೆ ತುಂಬಾ ನೋವಾಗಿದೆ. ಮಾನ್ಯ ಐಟಿ ಅಧಿಕಾರಿಗಳೇ, ನನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ.

ಸೌಮ್ಯ ನನ್ನನ್ನು ಕ್ಷಮಿಸು. ಮಕ್ಕಳನ್ನು ಚೆನ್ನಾಗಿ ನೋಡಿಕೋ. ಲಕ್ಷ್ಮೀದೇವಿ, ಪದ್ಮಾ, ಸತೀಶ್ ನಿಮ್ಮೊಂದಿಗೆ ಹುಟ್ಟಿ ನಿಮಗೆ ಸಹಾಯ ಮಾಡಬೇಕೆಂಬ ಆಸೆ ಇಂದಿಗೇ ಕಮರಿದೆ. ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿಎಸ್‌ಎಸ್ ಶಾಲೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಪ್ಪ, ಅಮ್ಮ ಇಳಿ ವಯಸ್ಸಿನಲ್ಲಿ ನಿಮ್ಮನ್ನೆಲ್ಲಾ ಸಾಕಬೇಕಾಗಿದ್ದ ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ, ಕ್ಷಮಿಸಿ.

ರಮೇಶ್ ಕುಮಾರ್, ಪರಮೇಶ್ವರ್ ಪಿಎ

LEAVE A REPLY

Please enter your comment!
Please enter your name here