ಉಗ್ರರು ನುಸುಳಿರುವ ಶಂಕೆ ಹಿನ್ನೆಲೆ; ಬೆಂಗಳೂರು ಮತ್ತು ರಾಮನಗರದಲ್ಲಿ ಹೈ ಅಲರ್ಟ್ ಘೋಷಣೆ

0
544

ನ್ಯೂಸ್ ಕನ್ನಡ ವರದಿ: ಉಗ್ರರು ನುಸುಳಿರುವ ಶಂಕೆಯಿಂದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲೂ ಎಚ್ಚರಿಕೆ ರವಾನಿಸಲಾಗಿದೆ.

ಬೆಂಗಳೂರಿನ ಮೇಲೆ ಕೂಡ ಉಗ್ರರ ಕರಿನೆರಳು ಇರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಗುಪ್ತಚರ ಇಲಾಖೆಯನ್ನ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ಮುನ್ನೆಚ್ಚರಿಕೆಗಾಗಿ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮೆಜೆಸ್ಟಿಕ್, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಅನೇಕ ಕಡೆ ಟೈಟ್ ಸೆಕ್ಯುರಿಟಿ ನಿಯೋಜನೆ ಮಾಡಲಾಗಿದೆ.

ರಾಮನಗರದಲ್ಲೂ ನಾಲ್ಕು ತಾಲ್ಲೂಕುಗಳ ಪ್ರಮುಖ ಪ್ರವಾಸಿ ತಾಣಗಳು, ಸರಕಾರಿ ಬಸ್ ನಿಲ್ದಾಣಗಳಲ್ಲಿ ತಪಾಸಣೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ತಪಾಸಣೆ ಕಾರ್ಯ ಕೈಗೊಂಡಿದ್ದಾರೆ ಕಾರಣ ವರ್ಷದ ಹಿಂದೆ ರಾಮನಗರದಲ್ಲಿ ಉಗ್ರ ಮುನೀರ್ ಶೇಖ್ ಸೆರೆ ಸಿಕ್ಕಿದ್ದನು ಉಗ್ರನ ಜೊತೆ ಎರಡು ಜೀವಂತ ಬಾಂಬ್ ಕೂಡ ಪತ್ತೆ ಯಾಗಿತ್ತು ಈ ಹಿನ್ನೆಲೆಯಲ್ಲಿ ರಾಮನಗರದ ಅನೇಕ ಕಡೆ ಹೈ ಅಲರ್ಟ್ ಘೋಷಣೆ ಮಾಡಿದೆ.

LEAVE A REPLY

Please enter your comment!
Please enter your name here