ರಾಜಸ್ಥಾನ ಸರಕಾರದಲ್ಲಿ ಅಲ್ಲೋಲ ಕಲ್ಲೋಲ; ಶಕ್ತಿ ಪ್ರದರ್ಶಿಸಿದ ಉಪಮುಖ್ಯಮಂತ್ರಿ ಸಚಿನ್ ಪೈಲಟ್!

0
2603

ನ್ಯೂಸ್ ಕನ್ನಡ ವರದಿ (13-6-2019): ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ತಾರಕಕ್ಕೇರಿರುವ ಸೂಚನೆ ಸಿಕ್ಕಿದೆ. ಸಚಿನ್ ಪೈಲಟ್ ಅವರ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯನ್ನು ಬುಧವಾರ ಆಚರಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಚಿನ್ ಪೈಲಟ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಬೆಂಬಲಿಸಿದ್ದ 62 ಕ್ಕೂ ಹೆಚ್ಚು ಶಾಸಕರು ಭಾಗವಹಿದ್ದರು. ಇವರಲ್ಲಿ ಹದಿನೈದು ಜನ ಸಚಿವರೂ ಇದ್ದರು.

ಜೊತೆಗೆ ಈ ಕಾರ್ಯಕ್ರಮಕ್ಕೆ ಅಶೋಕ್ ಗೆಹ್ಲೋಟ್ ಗೈರಾಗಿದ್ದರು. ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್ಪಿಯ ನಾಲ್ವರು ಶಾಸಕರು ಮತ್ತು ನಾಲ್ಕು ಪಕ್ಷೇತರರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆದ್ದಿತ್ತು. ನಂತರ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿತ್ತು. ಹಿರಿತನದ ಆಧಾರದ ಮೇಲೆ ಗೆಹ್ಲೋಟ್ ಅವರಿಗೇ ಸಿಎಂ ಸ್ಥಾನ ನೀಡಲಾಗಿತ್ತು. ಅದು ಪೈಲಟ್ ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಹಾಗೂ ಲೋಕಸಭಾ ಚುನಾವಣೆಯಲ್ಲಿ ಗೆಹ್ಲೋಟ್ ಅವರ ಪುತ್ರ ಸೋತಿದ್ದು ಇದಕ್ಕೆ ಸಚಿನ್ ಪೈಲಟ್ ಕಾರಣ ಎಂದು ಗೆಹ್ಲೋಟ್ ದೂರಿದ್ದರು.

LEAVE A REPLY

Please enter your comment!
Please enter your name here