ಡಾ.ರಾಜ್ ರನ್ನು ವೀರಪ್ಪನ್ ನಿಂದ ಬಿಡಿಸುವಲ್ಲಿ ಸಿದ್ಧಾರ್ಥ್ ಪಾತ್ರವೇನು ಗೊತ್ತೇ?

0
758

ನ್ಯೂಸ್ ಕನ್ನಡ ವರದಿ: ಕಾಡುಗಳ್ಳ ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿದ್ದ ವರನಟ ಡಾ.ರಾಜ್‍ಕುಮಾರ್ ಅವರ ಬಿಡುಗಡೆಯಲ್ಲಿ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರು ಬಹುಮುಖ್ಯ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ. ವರ ನಟ ಡಾ. ರಾಜ್‍ಕುಮಾರ್ ಅವರು 19 ವರ್ಷಗಳ ಹಿಂದೆ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಬಳಿಕ ರಾಜ್ ಕುಟುಂಬಸ್ಥರೊಂದಿಗೆ ಹಾಗೂ ಇತರರೊಂದಿಗೆ ಸಿದ್ದಾರ್ಥ್ ಸಭೆ ನಡೆಸಿ ಮಾತುಕತೆ ನಡೆಸಿದ್ದರು.

 

ರಾಜ್ ಬಿಡುಗಡೆ ಕುರಿತು ತಮಿಳುನಾಡು ಸರ್ಕಾರದ ಸಹಾಯ ಪಡೆದಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಆದಿಕೇಶವಲು ಜೊತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಳಸಿಕೊಂಡು ರಾಜ್‍ಕುಮಾರ್ ಅವರ ಬಿಡುಗಡೆಗೊಳಿಸಲು ಸಿದ್ದಾರ್ಥ್ ನೇತೃತ್ವದಲ್ಲೇ ಪ್ರಯತ್ನಗಳು ನಡೆದಿದ್ದವು. ಬಳಿಕ ವೀರಪ್ಪನ್ ಸಂಪರ್ಕದಲ್ಲಿದ್ದ ತಮಿಳುನಾಡಿನ ಧನು, ನೆಡುಮಾರನ್ ಹಾಗೂ ಕೊಳತ್ತೂರು ಮಣಿಯನ್ನು ಸಂಪರ್ಕಿಸಿ ಕೊನೆಗೂ ರಾಜ್‍ಕುಮಾರ್ ಅವರನ್ನು ಬಿಡುಗಡೆ ಮಾಡುವಲ್ಲಿ ಸಿದ್ದಾರ್ಥ್ ಯಶಸ್ವಿಯಾಗಿದ್ದರು ಎಂದು ಹೇಳಲಾಗಿದೆ.

ನರಹಂತಕ ಹಾಗೂ ಕಾಡುಗಳ್ಳ ವೀರಪ್ಪನ್‍ನಿಂದ ಡಾ.ರಾಜ್‍ಕುಮಾರ್ ಅವರನ್ನು ಬಿಡುಗಡೆಗೊಳಿಸುವ ಪ್ರಯತ್ನದ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪರಿಶ್ರಮವೂ ಇದೆ.  ದುರ್ದೈವಶಾತ್ ಇಂದು ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here