ರಾಜ್ಯದಲ್ಲಿ ಇವತ್ತೂ ಕೊರೊನ ಬಿಗ್ ಶಾಕ್: ಬೆಂಗಳೂರಲ್ಲಿ 2050 ಪ್ರಕರಣ, ರಾಜ್ಯದಲ್ಲಿ 4764 ಪ್ರಕರಣ ಪತ್ತೆ

0
26

ನ್ಯೂಸ್ ಕನ್ನಡ ವರದಿ: ಕಳೆದೆರಡು ದಿನಗಳಿಂದ ಇಳಿಮುಖವಾಗುವ ಕೊಂಚ ಲಕ್ಷಣ ತೋರಿದ್ದ ಕರೊನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಹೊಸ ದಾಖಲೆಯನ್ನೇ ಬರೆದಿದೆ. ರಾಜ್ಯಾದ್ಯಂತ ಹೊಸದಾಗಿ ಪತ್ತೆಯಾದ ಕೋವಿಡ್​ ರೋಗಿಗಳು ಮತ್ತೆ ಆತಂಕ ಮೂಡಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 4764 ಹೊಸ ಕರೋನಾ ಪ್ರಕರಣಗಳು ಧೃಡಪಟ್ಟಿವೆ. 55 ರೋಗಿಗಳು ಕರೋನಾದಿಂದಾಗಿ ಮರಣಹೊಂದಿದ್ದು, 1780 ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆಂದು ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದ ಅಂಕಿಅಂಶಗಳು ಹೇಳುತ್ತಿವೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,833ಕ್ಕೇರಿದೆ. ಈವರೆಗೆ 27,239 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಹೊಂದಿದ್ದು, 1519 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದ್ದು ಇಂದಿಗೆ ಆ ಸಂಖ್ಯೆ 47,069ಕ್ಕೆ ಏರಿಕೆಯಾಗಿದೆ. ಒಟ್ಟಿ 618 ಜನರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಲಾಕ್‌ಡೌನ್‌ ನಂತರವೂ ಇಳಿಮುಖವಾಗಿಲ್ಲ. ಲಾಕ್‌ಡೌನ್‌ ಸಮಯದಲ್ಲೇ 10,000ದ ಗಡಿ ದಾಟಿದ್ದ ಸೋಂಕಿತರ ಸಂಖ್ಯೆಗೆ ಇಂದು 2050 ಸೋಂಕಿತರು ಸೇರ್ಪಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here