ಭ್ರಷ್ಟ ಮೋದಿ ಅಂಬಾನಿಗೆ 30,000ಕೋಟಿ ರೂ. ನೀಡಿದ್ದಾರೆ: ರಾಹುಲ್ ಗಾಂಧಿ

0
269

ನ್ಯೂಸ್ ಕನ್ನಡ ವರದಿ: (11.10.18) ರಫೇಲ್ ಯುದ್ಧ ವಿಮಾನ ಖರೀದಿಯ ಕುರಿತಾದಂತೆ ಹಲವಾರು ದಿನಗಳಿಂದ ಸ್ಫೋಟಕ ಸತ್ಯಗಳು ಹೊರ ಬರುತ್ತಲೇ ಇದೆ. ಈ ನಡುವೆ ಕೇಂದ್ರ ಸರಕಾರ ಮಾತ್ರ ನುಣುಚಿಕೊಳ್ಳುತ್ತಿದೆ. ಹಲವಾರು ದಿನಗಳಿಂದ ಈ ಕುರಿತಾದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಈ ಕುರಿತಾದಂತೆ ರಾಹುಲ್ ಗಾಂಧಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇರವಾಗಿ ರಫೇಲ್ ಡೀಲ್ ನಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೊದಿ ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ದೇ ವೇಳೆ ಅನಿಲ್‌ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿಯನ್ನು ಬಹುಮಾನ ವಾಗಿ ನೀಡಿದ್ದಾರೆ. ಅವರು ದೇಶದ ಚೌಕೀದಾರ್‌ ಅಲ್ಲ ಅಂಬಾನಿಯ ಚೌಕೀದಾರ್‌ ಎಂದರು. ಫ್ರಾನ್ಸ್‌ನ ಸುದ್ದಿ ವೆಬ್‌ಸೈಟೊಂದು ಬಿಡುಗಡೆ ಮಾಡಿರುವ ರಫೇಲ್‌ ಕುರಿತ ಡಸಾಲ್ಟ್ ಎವಿಯೇಷನ್‌ನ ದಾಖಲೆಗಳನ್ನು ಉಲ್ಲೇಖ ಮಾಡಿ ತೀವ್ರ ವಾಗ್ಧಾಳಿ ನಡೆಸಿದರು. ಯಾಕೆ ರಕ್ಷಣಾ ಸಚಿವರು ತಕ್ಷಣ ಫ್ರಾನ್ಸ್‌ಗೆ ತೆರಳಿದರು? ತುರ್ತು ಅಗತ್ಯವಿತ್ತೇ? ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here