ನಾನು ಸತ್ತರೂ ಸರಿ, ಮೋದಿಯ ತಂದೆ ತಾಯಿಯನ್ನು ಅವಮಾನಿಸಲಾರೆ: ರಾಹುಲ್ ಗಾಂಧಿ

0
245

ನ್ಯೂಸ್ ಕನ್ನಡ ವರದಿ: (16.05.19) ಇತ್ತೀಚೆಗೆ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿಯನ್ನು ಟೀಕಿಸುವ ಭರದಲ್ಲಿ ರಾಜೀವ್ ಗಾಂಧಿಯವರನ್ನು ಅವಮಾನಿಸಿದ್ದರು. ನಿಮ್ಮ ತಂದೆ ನಂ.1 ಭ್ರಷ್ಟಾಚಾರಿಯಾಗಿ ಸತ್ತರು ಎಂದು ಮೋದಿ ಹೇಳಿಕೆ ನೀಡಿದ್ದರು. ಬಳಿಕ ರಾಹುಲ್ ಗಾಂಧಿ ಪ್ರಬುದ್ಧ ಪ್ರತಿಕ್ರಿಯೆಯನ್ನೂ ನೀಡಿದ್ದರು. ಇದೀಗ ಈ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವು ಪ್ರೀತಿಯಿಂದಲೇ ಜಯ ಗಳಿಸಿದೆ. ನನ್ನ ತಂದೆಯನ್ನು ಟೀಕಿಸುತ್ತಿರುವ ಪ್ರಧಾನಿಯ ತಂದೆ ತಾಯಿಯ ಕುರಿತು ನಾನು ಯಾವತ್ತಿಗೂ ಕೆಟ್ಟದಾಗಿ ಮಾತನಾಡುವುದಿಲ್ಲ. ಏಕೆಂದ್ರೆ ನಾನು ಆರೆಸ್ಸೆಸ್ ಅಥವಾ ಬಿಜೆಪಿಗೆ ಸೇರಿದವನಲ್ಲ. ನಾನು ಸತ್ತರೂ ಸರಿ ಪ್ರಧಾನಿ ಮೋದಿಯ ತಂದೆ ತಾಯಿಯನ್ನು ಅವಮಾನಿಸಲಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮಧ್ಯಪ್ರದೇಶದ ಉಜ್ಜೆನ್ ಜಿಲ್ಲೆಯ ತರಾನಾದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ನಾನು ಸತ್ತರೂ ಕೂಡ ಅವರ ಪಾಲಕರನ್ನು ಅವಮಾನಿಸುವುದಿಲ್ಲ. ಪ್ರಧಾನಿಯ ದ್ವೇಷ ಮತ್ತು ಕೋಪವನ್ನು ಪ್ರೀತಿಯಿಂದಲೇ ಎದುರಿಸುವುದಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯನ್ನು ಟ್ವೀಟರ್​ನಲ್ಲಿ ಕಾಲೆಳೆದಿರುವ ರಾಹುಲ್ ಗಾಂಧಿ, ಶಬ್ದಕೋಶಕ್ಕೆ ‘ಮೋದಿಲೈ’ ಎನ್ನುವ ಶಬ್ದ ಸೇರಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಸತ್ಯವನ್ನು ಪದೇಪದೇ ಬದಲಾಯಿಸುವುದು ಇದರ ಅರ್ಥವಾಗಿದೆ.

LEAVE A REPLY

Please enter your comment!
Please enter your name here