ರಫೇಲ್ ವಿವಾದ; ಇದರಿಂದ ಛತ್ತೀಸ್‌ಗಢದ ಗ್ರಾಮಸ್ಥರಿಗೆ ಕಿರಿಕಿರಿ

0
133

ನ್ಯೂಸ್ ಕನ್ನಡ ವರದಿ (16-4-2019): ಛತ್ತೀಸ್ ಗಢದ ಹಳ್ಳಿಯೊಂದರ ಹೆಸರು ರಫೇಲ್ ಎಂದಾಗಿದ್ದು, ಅದೀಗ ಜನರನ್ನು ಇರುಸು ಮುರುಸಿಗೆ ಒಳಪಡಿಸುತ್ತಾ ಇದೆ. ರಾಷ್ಟ್ರಮಟ್ಟದಲ್ಲಿ ಇದು ಚರ್ಚೆಯಾಗುತ್ತಾ ಇದ್ದು ಅದು ನಮಗೆ ಮುಜುಗರ ಉಂಟು ಮಾಡುತ್ತಿದೆ. ಹೀಗಾಗಿ ಹಳ್ಳಿಯ ಹೆಸರನ್ನೇ ಬದಲಾಯಿಸಿ ಎಂಬ ಒತ್ತಾಯ ಹಳ್ಳಿಯ ಜನರದ್ದು.

ಛತ್ತೀಸ್‌ಗಢದ ಮಹಾಮಂದ್ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಫೆಲ್ ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿವೆ. ಯಾವುದೇ ಚುನಾವಣೆಗೆ ಅಭ್ಯರ್ಥಿಗಳು ಪ್ರಚಾರಕ್ಕೂ ಬರುತ್ತಿಲ್ಲ, ಅಕ್ಕಪಕ್ಕದ ಊರಿನವರು ಇವರನ್ನು ಆಡಿಕೊಳ್ಳುತ್ತಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಚರ್ಚೆ ಆದಾಗಲೆಲ್ಲ ಈ ಹಳ್ಳಿಯ ಹೆಸರು ನಗೆಪಾಟಲಿಗೆ ಗುರಿಯಾಗುತ್ತಿದೆ. ಮೂಲಸೌಕರ್ಯವೂ ಇಲ್ಲದೆ ಈ ಹಳ್ಳಿಯ ಹೆಸರನ್ನೇ ಬಲಾಯಿಸಿ ಎಂದು ಮುಖ್ಯಮಂತ್ರಿಗೆ ಆಗ್ರಹಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನು ಮುಂದೆ ಯಾವ ಹೆಜ್ಜೆ ಇಡಲಾಗುತ್ತದೆ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here