ರಾಧಿಕಾ ಪಂಡಿತ್ ರೀ ಎಂಟ್ರಿ: ಸಿನೆಮಾ ಟೀಸರ್ ಬಿಡುಗಡೆ!

0
173

ನ್ಯೂಸ್ ಕನ್ನಡ ವರದಿ (9-2-2019): ರಾಧಿಕಾ ಪಂಡಿತ್ ಯಶ್ ಅವರೊಡನೆ ಮದುವೆಯಾದ ಬಳಿಕ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸುಮಾರು ಎರಡು ವರ್ಷದ ನಂತರ “ಆದಿ ಲಕ್ಷ್ಮಿ ಪುರಾಣ” ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.”ರಂಗಿತರಂಗ” ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿರುವ “ಆದಿ ಲಕ್ಷ್ಮಿ ಪುರಾಣ” ಟೀಸರ್ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ.

ಚಿತ್ರದಲ್ಲಿ ನಿರೂಪ್ ಭಂಡಾರಿ ಪೋಲೀಸ್ ಅಧಿಕಾರಿಯಾಗಿ ಕಾಣಿಸ್ಕೊಳ್ಳುತ್ತಿದ್ದಾರೆ. ನಟ ರಮೇಶ್ ಅರವಿಂದ್ ಟೀಸರ್ ಗೆ ಹಿನ್ನೆಲೆ ದನಿ ನೀಡಿದ್ದಾರೆ.ಇನ್ನು ಟೀಸರ್ ಬಿಡುಗಡೆ ಕುರಿತಂತೆ ರಾಧಿಕಾ ಪಂಡಿತ್ ಸಹ ನಿನ್ನೆ ಮುಂಜಾನೆಯೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದರು. ಇದು ನನ್ನ ಅಭಿಮಾನಿಗಳಿಗೆ “ವೀಕೆಂಡ್ ಸ್ಪೆಷಲ್” ಎಂದೂ ಆಕೆ ಹೇಳಿದ್ದರು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಪ್ರಿಯಾ ಅವರ ಚಿತ್ರಕಥೆ, ನಿರ್ದೇಶನ ಒಳಗೊಂಡಿದೆ.ಪ್ರಶಾಂತ್ ರಾಜಪ್ಪ ಸಂಬಾಷಣೆ,ಅನೂಪ್ ಭಂಡಾರಿ ಸಂಗೀತ, ಪ್ರೀತಾ ಜಯರಾಮನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದಲ್ಲದೆ ನಟಿ ತಾರಾ ಹಾಗೂ ಸುಚೀಂದ್ರ ಪ್ರಸಾದ್ ಪ್ರಮುಖ ತಾರಾಬಳಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here