ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿಗೆ ಮೊದಲ ಸ್ಥಾನ, ವಿಜಯಪುರಕ್ಕೆ ಕೊನೆ ಸ್ಥಾನ; ಫಲಿಯಾಂಶ ನೋಡಲು ಇಲ್ಲಿ ಕ್ಲಿಕ್​ ಮಾಡಿ!

0
37

ನ್ಯೂಸ್ ಕನ್ನಡ ವರದಿ: ಬಹು ನಿರೀಕ್ಷೆಯಿಂದ ಕಾದು ನೋಡುತ್ತಿದ್ದಂತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಬೆಳಿಗ್ಗೆ 11.30ಕ್ಕೆ ಪ್ರಕಟಗೊಳ್ಳಲಿದೆ ಎನ್ನಲಾಗುತ್ತಿದ್ದಂತ ಫಲಿತಾಂಶ 10 ಗಂಟೆಗೆ ಪ್ರಕಟಗೊಂಡಿದೆ. ಅಲ್ಲದೇ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೂ ಫಲಿತಾಂಶದ ಸಂದೇಶ ರವಾನೆಯಾಗಿದೆ. ಹೀಗಾಗಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಈ ಕೆಳಗಿನ ವಿಧಾನ ಅನುಸರಿಸಿ ಚೆಕ್ ಮಾಡಬಹುದಾಗಿದೆ.

ರಾಜ್ಯದ 6.7 ಲಕ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. http://karresults.nic.in/ ವೆಬ್ ಸೈಟ್ ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಈ ವೆಬ್ ಲಿಂಕ್ ದ್ರೇ.. ನಿಮ್ಮ ರಿಜಿಸ್ಟಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ಆ ಸ್ಥಳದಲ್ಲಿ ನೀವು ನಿಮ್ಮ ನೊಂದಣಿ ಸಂಖ್ಯೆಯನ್ನು ದಾಖಲಿಸಿದ್ರೇ ನಿಮ್ಮ ಫಲಿತಾಂಶ ನಿಮ್ಮ ಮುಂದೆ ತೆರೆದುಕೊಳ್ಳಲಿದೆ.

ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ಇಂದು ಶೇ.61.38ರಷ್ಟು ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉಡುಪಿ ಮೊದಲ ಸ್ಥಾನಗಳಿಸಿದ್ದರೇ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ, ಕೊಡಗು ಮೂರನೇ ಸ್ಥಾನವನ್ನು ಗಳಿಸಿವೆ. ಕೊನೆಯ ಮೂರು ಸ್ಥಾನಗಳನ್ನು ಚಿತ್ರದುರ್ಗ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಗಳಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, 2020ರ ದ್ವಿತೀಯ ಪಿಯುಸಿಯ ಫಲಿತಾಂಶ ನಾವು ಇವತ್ತು ಪ್ರಕಟ ಮಾಡಿದ್ದೇವೆ. ಅನೇಕ ಸವಾಲುಗಳ ನಡುವೆ ನಡೆದಂತ ಈ ಪರೀಕ್ಷೆಯ ಮೌಲ್ಯಮಾಪನ ಆನಂತ್ರ, ಪಿಯುಸಿ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶಗಳನ್ನು ಕೊಡುತ್ತಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದು ಎಂಬುದಾಗಿ ಹೇಳಲಿಚ್ಚಿಸುತ್ತೇನೆ.

ಪಿಯುಸಿ ಪರೀಕ್ಷೆ ಮಾರ್ಚ್ 3 ರಿಂದ ಮಾರ್ಚ್ 23ರವರೆಗೆ ನಡೆಯಬೇಕಿತ್ತು. ಆದ್ರೇ ಮಾರ್ಚ್ 22ರ ನಂತ್ರ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅದನ್ನು ಕೊರೋನಾ ಸಂಕಷ್ಟದ ನಡುವೆಯೂ ಜೂನ್ 18ರಂದು ಇಂಗ್ಲಿಷ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕೊರೋನಾ ತನ್ನ ಕೈಯನ್ನು ಎಲ್ಲಾಕಡೆಯಲ್ಲೂ ಚಾಚಿತ್ತು. ಎಸ್ ಓಪಿ ರಚಿಸಿ, ಅದರ ನಿರ್ದೇಶನದಂತೆ ನಡೆಸಲಾಯಿತು ಎಂದರು.

ಈ ಬಳಿಕ ಮೌಲ್ಯ ಮಾಪನ ಕೂಡ ಸವಾಲಿನ ಸಂಗತಿಯಾಗಿತ್ತು. ಇದರ ಮಧ್ಯೆಯೂ ಇನ್ಸಿಡೆಂಟ್ ಫ್ರೀ ಪರೀಕ್ಷೆಯನ್ನು ನಡೆಸಿ, ಮೌಲ್ಯ ಮಾಪನವನ್ನು ನಡೆಸಲು ಕಾರಣವಾದಂತ ಪಿಯು ಮಂಡಳಿಗೆ ಗೌರವ ಸಲ್ಲಿಸುವೆ.

1,016 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ನವೆಂಬರ್ ನಿಂದಲೇ ಪಿಯುಸಿ ಪರೀಕ್ಷೆಯ ಸಿದ್ಧತೆ ನಡೆಸಲಾಗಿತ್ತು. ಹಾಲ್ ಟಿಕೆಟ್ ವಿತರಣೆಯಲ್ಲೂ ಯಾವುದೇ ತೊಂದರೆ ಆಗಲಿಲ್ಲ. 70 ಮೌಲ್ಯ ಮಾಪನ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆಯ ಮೌಲ್ಯ ಮಾಪನವನ್ನು ಮೇ.16ರಿಂದ ಜುಲೈ.9ರ ವರೆಗೆ ನಡೆಸಲಾಯಿತು. ಈ ಮೌಲ್ಯಮಾಪನ ಕಾರ್ಯದಲ್ಲಿ 11,970 ಮೌಲ್ಯಮಾಪಕರು ಪಾಲ್ಗೊಂಡಿದ್ದರು. ಅವರಿಗೆಲ್ಲರಿಗೂ ಅಭಿನಂದನೆ, ಮೆಚ್ಚುಗೆಯನ್ನು ಸಲ್ಲಿಸುತ್ತೇನೆ ಎಂದರು.

ಈ ಬಾರಿ ಪರೀಕ್ಷೆಗೆ ಹಾಜರಾಗಿರುವವರು 6 ಲಕ್ಷದ 75 ಸಾವಿರದ 277 ವಿದ್ಯಾರ್ಥಿಗಳು. ಇವರಲ್ಲಿ ತೇರ್ಗಡೆಯಾಗಿರುವವರು 3,84,947 ವಿದ್ಯಾರ್ಥಿಗಳು. 2020ರ ಶೇಕಡಾವಾರು ಫಲಿತಾಂಶ 69.20 ಆಗಿದೆ. ಕಳೆದ ವರ್ಷ 68.68 ಆಗಿತ್ತು. ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 91,025 ಆಗಿದೆ. ಇದರಲ್ಲಿ ತೇರ್ಗಡೆಯಾದವರು 25,602 ವಿದ್ಯಾರ್ಥಿಗಳು ಆಗಿದ್ದಾರೆ. ಇದರ ಫಲಿತಾಂಶ ಶೇ.46.56 ಆಗಿದೆ. 27.37 ಕಳೆದ ವರ್ಷ ಆಗಿತ್ತು. ಖಾಸಗೀ ಅಭ್ಯರ್ಥಿಗಳ ಪ್ರಮಾಣ 27,985 ವಿದ್ಯಾರ್ಥಿಗಳು ಆಗಿದ್ದಾರೆ. ಇವರಲ್ಲಿ 6,748 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇಕಡಾವಾರು ಫಲಿತಾಂಶ ಪ್ರಮಾಣ ಶೇ.24.11 ಆಗಿದೆ ಎಂದರು. ಈ ಪರೀಕ್ಷೆಯ ಫಲಿತಾಂಶವನ್ನು ಎಲ್ಲಾ ಕಾಲೇಜುಗಳಲ್ಲಿ ಪ್ರಕಟಗೊಳ್ಳಲಿದೆ. ಇದರ ಅಂಕಿ ಅಂಶಗಳ ಫಲಿತಾಂಶವನ್ನು ಈಗ ನಾವು ಬಿಡುಗಡೆ ಮಾಡಲಿದ್ದೇವೆ ಎಂಬುದಾಗಿ ತಿಳಿಸಿದರು.

ಈ ವರ್ಷ ವಿಜ್ಞಾನ ವಿಭಾಗದಲ್ಲಿ ಪಾಸ್ ಆದವರ ಪ್ರಮಾಣ ಶೇ.76.02 ಆಗಿದೆ. ಕಳೆದ ವರ್ಷ ಶೇ.66.58 ಆಗಿತ್ತು. ಕಾಮರ್ಸ್ ವಿಭಾಗದಲ್ಲಿ ಶೇ.65.52 ಪಾಸ್ ಆಗಿದ್ದಾರೆ. ಕಳೆದ ವರ್ಷ ಶೇ.66.39 ಆಗಿತ್ತು. ಕಲಾ ವಿಭಾಗದಲ್ಲಿ ಶೇ.41.27 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷ ಶೇ.50.53 ಆಗಿದೆ. ಒಟ್ಟಾರೆ ಶೇ.61.80 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷ 61.73 ವಿದ್ಯಾರ್ಥಿಗಳು ಪಾಸ್ ಆಗಿದ್ದರು ಎಂಬುದಾಗಿ ತಿಳಿಸಿದರು.

ನಗರ ಪ್ರದೇಶದಲ್ಲಿ 62.60 ಆಗಿದೆ. ಕಳೆದ ವರ್ಷ 61.38 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಗ್ರಾಮಾಂತರ ಪ್ರದೇಶದಲ್ಲಿ 58.99 ಆಗಿದ್ದರೇ, ಕಳೆದ ವರ್ಷ 62.88 ವಿದ್ಯಾರ್ಥಿಗಳು ಪಾಸ್ ಆಗಿದ್ದರು. 85% ಗಿಂತ ಜಾಸ್ತಿ ಮಾರ್ಕ್ ತಗೊಂಡಿರೋರು 68,866 ವಿದ್ಯಾರ್ಥಿಗಳು ಆಗಿದ್ದಾರೆ ಎಂಬುದಾಗಿ ತಿಳಿಸಿದರು.

ಇನ್ನೂ ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲೆ ಮೊದಲ ಸ್ಥಾನವನ್ನು ಪಿಯು ಫಲಿತಾಂಶದಲ್ಲಿ ಪಡೆದಿವೆ. ಮೊದಲು ಉಡುಪಿ – 90.71ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ.92.02 ರಷ್ಟು ಫಲಿತಾಂಶ ಬಂದಿತ್ತು. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ ಗಳಿಸಿದೆ. ಈ ವರ್ಷ 90.07 ರಷ್ಟು. ಮೂರನೇ ಸ್ಥಾನ ಕೊಡಗು ಗಳಿಸಿದೆ. 81.53 ರಷ್ಟು ಫಲಿತಾಂಶ ಪಡೆದಿದೆ. ಕೊನೆಯ ಮೂರು ಜಿಲ್ಲೆಗಳೆಂದರೇ ಚಿತ್ರದುರ್ಗ ಶೇ.56.8, ರಾಯಚೂರು- 56.22ರಷ್ಟು ಹಾಗೂ ವಿಜಯಪುರ 54.22 ರಷ್ಟು ಫಲಿತಾಂಶ ಗಳಿಸುವ ಮೂಲಕ ಕೊನೆಯ ಸ್ಥಾನವನ್ನು ಗಳಿಸಿದೆ ಎಂಬುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here