ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನ ಚಿಕಿತ್ಸೆಗೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ

0
87

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಅಲ್ಲದೇ, ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗಾಗಿ ಅವಕಾಶವನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ. ಜೊತೆ ಜೊತೆಗೆ ದುಬಾರಿ ಚಿಕಿತ್ಸಾ ವೆಚ್ಚ ಆಗದಿರಲಿ ಅಂತ ಖಾಸಗೀ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯಲು ದರ ನಿಗದಿ ಮಾಡಿದೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಸರ್ಕಾರಿ ಅಲ್ಲದೇ ಖಾಸಗೀ ಆಸ್ಪತ್ರೆಗಳಿಗೂ ಕೊರೋನಾ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. ಆದ್ರೇ ಖಾಸಗೀ ಆಸ್ಪತ್ರೆಗಳು ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಯಾವುದಕ್ಕೆ ಎಷ್ಟು ಹಣ ಪಡೆಯಬೇಕು ಎಂಬ ದರ ಪಟ್ಟಿಯನ್ನು ಕೂಡ ಫಿಕ್ಸ್ ಮಾಡಿದೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಮಾಡಿದ್ರೆ ಖಾಸಗೀ ಆಸ್ಪತ್ರೆಯ ದರ ಪಟ್ಟಿ

ಜನರಲ್ ವಾರ್ಡ್ – ರೂ.5,200

ಹೆಚ್ ಡಿ ಯು – ರೂ.7,000

ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್ – ರೂ.8,500

ಐಸೋಲೇಷನ್ ವಿತ್ ವೆಂಟಿಲೇಷನ್ – ರೂ.10,000

ನೇರವಾಗಿ ಕೊರೋನಾ ಸೋಂಕಿತರು ಖಾಸಗೀ ಆಸ್ಪತ್ರೆಗೆ ದಾಖಲಾದಾಗ ದರಪಟ್ಟಿ

ಜನರಲ್ ವಾರ್ಡ್ – ರೂ.10,000

ಹೆಚ್ ಡಿ ಯು – ರೂ.12,000

ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್ – ರೂ.15,000

ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್ – ರೂ.25,000

LEAVE A REPLY

Please enter your comment!
Please enter your name here