ಪ್ರಿಯಾಂಕಾ ಉಪೇಂದ್ರ ಅವರ ಕೆಂಗಣ್ಣಿಗೆ ಗುರಿಯಾದ ರಚಿತಾ ರಾಮ್-ಉಪೇಂದ್ರ ಬೋಲ್ಡ್ ಸೀನ್!

0
3764

ನ್ಯೂಸ್ ಕನ್ನಡ ವರದಿ (12-6-2019): ನಟ ಉಪೇಂದ್ರ ಮತ್ತು ನಟಿ ರಚಿತಾ ರಾಮ್‌ ನಟನೆಯ ‘ಐ ಲವ್‌ ಯೂ’ ಸಿನಿಮಾ ಇನ್ನೇನು ತೆರೆ ಮೇಲೆ ಅಪ್ಪಳಿಸಲು ಸಿದ್ಧವಾಗಿರುವ ಬೆನ್ನಲ್ಲೇ ಉಪೇಂದ್ರ ಜತೆಗೆ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ರಚಿತಾ ರಾಮ್‌ ವಿರುದ್ಧ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಕಿಡಿಕಾರಿದ್ದಾರೆ. ರಚಿತಾ ರಾಮ್ ಸಂದರ್ಶನವೊಂದರಲ್ಲಿ ಈ ಹಾಡಿನ ಶೂಟಿಂಗ್ ಮಾಡಿದ್ದು ಉಪೇಂದ್ರ ಎಂದು ಹೇಳಿದ್ದರಂತೆ. ಇದು ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರರ ಸಿಟ್ಟಿಗೆ ಕಾರಣವಾಗಿದೆ.

ಈ ಹಾಡಿನಲ್ಲಿ ರಚಿತಾ ಮತ್ತು ಉಪ್ಪೇಂದ್ರ ದೃಶ್ಯಗಳು ಕೆಟ್ಟ ಭಾವನೆ ಮೂಡಿಸುತ್ತಿದೆ. ಪ್ರತಿ ಸಂದರ್ಶನದಲ್ಲೂ ರಚಿತಾ, ಉಪೇಂದ್ರ ಹೆಸರು ತರುತ್ತಿದ್ದಾಳೆ. ಮೊದಲು ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಹೇಳಿಕೊಳ್ಳಲಿ. ಅದನ್ನ ಬಿಟ್ಟು ಪದೇಪದೆ ಉಪ್ಪೇಂದ್ರ ಹೆಸರು ಹೇಳುವುದು ಯಾಕೆ? ಸಿನೆಮಾ ಕಥೆ ಕೇಳಿದಾಗ ಒಂದು ಕೌಟುಂಬಿಕ ಕಥಾವಸ್ತುವಾಗಿತ್ತು. ಟ್ರೆಲರ್​ನಲ್ಲಿ ಹಾಡು ನೋಡುವವರೆಗೂ ಸಾಂಗ್ ಬಗ್ಗೆ ಗೊತ್ತಿರಲಿಲ್ಲ. ಚಿತ್ರದ ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್. ಆದರೆ ರಚಿತಾ ರಾಮ್​ ಹಾಡು ಉಪೇಂದ್ರ ನಿರ್ದೇಶಕರಾಗಿದ್ದಾರೆ ಎನ್ನುತ್ತಿದ್ದಾರೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಕೋಪಗೊಂಡಿದ್ದಾರೆ.

LEAVE A REPLY

Please enter your comment!
Please enter your name here