ತನ್ನ ಸಿಟ್ಟು ಸೆಡವಿನಿಂದಲೇ ಧುರ್ಯೋಧನ ನಾಶವಾಗಿದ್ದ: ಮೋದಿಗೆ ಪ್ರಿಯಾಂಕಾ ಟಾಂಗ್!

0
370

ನ್ಯೂಸ್ ಕನ್ನಡ ವರದಿ(07.5.19): ಕೆಲ ದಿನಗಳ ಹಿಂದೆ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹೀನಾಯವಾಗಿ ನಿಂಧಿಸಿದ್ದರು. ಈ ಕುರಿತಾದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಕುರಿತಾದಂತೆ ಮಾತನಾಡಿದ ರಾಜೀವ್ ಗಾಂಧಿ ಪುತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ, ಧುರ್ಯೋಧನ ಕೂಡಾ ತನ್ನ ಸಿಟ್ಟಿನಿಂದಲೇ ನಾಶವಾಗಿದ್ದ ಎಂದು ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ.

ಅಂಬಾಲಾ ಕಾಂಗ್ರೆಸ್‌ ಅಭ್ಯರ್ಥಿ ಕುಮಾರಿ ಸೇಲ್ಜಾ ಪರ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಪ್ರಿಯಾಂಕಾ ಗಾಂಧಿ, ಅವರು ‘ಪ್ರಧಾನಿ ಮೋದಿ ಅವರಿಗೆ ಧೈರ್ಯವಿದ್ದರೆ ಅವರು ಅಭಿವೃದ್ಧಿಯ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ; ಜನರ ಮನಸ್ಸನ್ನು ಬೇರೆಡೆಗೆ ಹರಿಸುವ ಪ್ರಯತ್ನವನ್ನು ಅವರು ಕೈಬಿಡಲಿ’ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ದಿನದ ಹಿಂದಷ್ಟೇ ತಮ್ಮ ಚುನಾವಣಾ ಭಾಷಣದಲ್ಲಿ ಪ್ರಿಯಾಂಕಾ ಅವರ ದಿವಂಗತ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಭ್ರಷ್ಟಾಚಾರಿ ನಂಬರ್‌ 1 ಎಂದು ಕರೆದಿದ್ದರು.

LEAVE A REPLY

Please enter your comment!
Please enter your name here