ಕಣ್ಸನ್ನೆ ಬಳಿಕ ಮತ್ತೆ ಯೂಟ್ಯೂಬ್ ಟ್ರೆಂಡಿಗ್’ನಲ್ಲಿರುವ ಪ್ರಿಯಾ ಪ್ರಕಾಶ್!

0
450

ನ್ಯೂಸ್ ಕನ್ನಡ ವರದಿ (9-2-2019): ಒರು ಆಡಾರ್ ಲವ್ ಚಿತ್ರದಲ್ಲಿನ ಕಣ್ಸನೆ ಮೂಲಕ ರಾತ್ರೋ ರಾತ್ರಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅದೇ ಸಿನಿಮಾದಲ್ಲಿನ ಲಿಪ್ ಲಾಕ್ ದೃಶ್ಯದಿಂದಾಗಿ ಸುದ್ದಿಯಾಗಿ ಟ್ರೋಲಾಗುತ್ತಿದ್ದಾರೆ.

ಒಮರ್ ಲೂಲೂ ನಿರ್ದೇಶನದ ಒರು ಆಡಾರ್ ಲವ್ ಚಿತ್ರದಲ್ಲಿ ಶಾಲಾ ಆವರಣದಲ್ಲಿ ನಾಯಕ ನಟ ರೋಷನ್ ಅಬ್ದುಲ್ ರಾಹೊಪ್ ಜೊತೆಗೆ ಪ್ರಿಯಾ ವಾರಿಯರ್ ಲಿಪ್ ಲಾಕ್ ಮಾಡಿರುವ ವಿಡಿಯೋ ಇದಾಗಿದೆ. ಫೆಬ್ರವರಿ 6 ರಂದು ಬಿಡುಗಡೆಯಾಗಿರುವ ಈ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ 19,58,501 ಮಂದಿ ವೀಕ್ಷಿಸಿದ್ದಾರೆ. ಆದರೆ, 50 ಸಾವಿರ ಜನರು ಡಿಸ್ ಲೈಕ್ ಮಾಡಿದ್ದಾರೆ. 25 ಸಾವಿರ ಜನ ಲೈಕ್ ಮಾಡಿದ್ದಾರೆ.

ಇದೊಂದು ರೋಮ್ಯಾನ್ಸಾ ಅಥವಾ ಸಿನಿಮಾ ಪ್ರಚಾರಕ್ಕಾಗಿ ಬಳಸಿರುವ ಕೆಳಮಟ್ಟದ ಹಾಟ್ ವಿಡಿಯೋನಾ ಎಂದು ಬಳಕೆದಾರರು ಪ್ರಶ್ನಿಸಿದ್ದು, ಒಂದು ನಿಮಿಷದ ವಿಡಿಯೋಗೆ ಮಿಲಿಯನ್ ಜನರು ಡಿಸ್ ಲೈಕ್ ಮಾಡುವುದನ್ನು ಕಾಯುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.ಲೈಂಗಿಕ ಚಿತ್ರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದರೆ, ಶಾಲಾ ಮಕ್ಕಳನ್ನು ಹಾಳು ಮಾಡುವ ಇಂತಹ ಚಿತ್ರಗಳನ್ನು ನಿಷೇಧಿಸಬೇಕು ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here