ಕಣ್ಸನ್ನೆ ನಟಿ ಪ್ರಿಯಾ ಪ್ರಕಾಶ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗಳು!

0
690

ನ್ಯೂಸ್ ಕನ್ನಡ ವರದಿ(10-04-2018): ‘ಒರು ಅಡಾರ್ ಲವ್’ ಚಿತ್ರದ ಹಾಡೊಂದರಲ್ಲಿ ತನ್ನ ಕಣ್ಣು ಸನ್ನೆಯ ಮೂಲಕ ಭಾರಿ ಸದ್ದು ಮಾಡಿ ಯುವಕರ ನಿದ್ರೆಗೆಡಿಸಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಕಣ್ಣು ಹೊಡೆಯುವುದು ಹಾಗೂ ಕಣ್ಣಿನ ಹುಬ್ಬು ಹಾರಿಸುವುದು ಇಸ್ಲಾಮ್ ಗೆ ವಿರುದ್ಧವಾಗಿದ್ದು, ಈ ಮೂಲಕ ಪ್ರಿಯಾ ವಾರಿಯರ್ ಹಾಡಿನಲ್ಲಿ ಇಸ್ಲಾಮಿನ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಎಂದು ಹೈದ್ರಾಬಾದ್ ಮೂಲದ ಇಬ್ಬರು ಕೋರ್ಟ್ ಮೆಟ್ಟಲೇರಿದ್ದಾರೆ. ಪ್ರವಾದಿ ಕೀರ್ತನೆಯ ಈ ಹಾಡನ್ನು ಚಿತ್ರದಿಂದ ತೆಗೆದು ಹಾಕುವುದರೊಂದಿಗೆ ನಟಿ ಪ್ರಿಯಾ ವಾರಿಯರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರ್ಟಿನಲ್ಲಿ ಅವರು ನಿವೇದಿಸಿ ಕೊಂಡಿದ್ದಾರೆ.

ಈ ಮೊದಲೂ ಕೂಡ ಹೈದರಾಬಾದಿನ ಫಲಕ್ನಾಮಾ ಪೋಲಿಸ್ ಠಾಣೆಯಲ್ಲಿ ‘ ಒರು ಅಡಾರ್ ಲವ್’ ಸಿನಿಮಾ ಹಾಡಿನ ವಿರುದ್ಧ ದೂರು ದಾಖಲಿಸಲ್ಪಟ್ಟಿದ್ದವು. ಈ ಹಾಡನ್ನು ಚಿತ್ರದಿಂದ ತೆಗೆದು ಹಾಕುವಂತೆ ಮೊಹಮ್ಮದ್ ಅಬ್ದುಲ್ ಖಾನ್ ಎಂಬವರು ದೂರು ದಾಖಲಿಸಿದ್ದರು. ಈಗ ಪ್ರಕರಣ ಸುಪ್ರೀಮ್ ಕೋರ್ಟ್ ಮೆಟ್ಟಲು ಹತ್ತಿದ್ದು, ಪ್ರಿಯಾ ವಾರಿಯರ್ ಮತ್ತೊಮ್ಮೆ ಸಂಕಷ್ಟಕ್ಕೀಡಾಗುವ ಲಕ್ಷಣಗಳು ಗೋಚರಿಸುತ್ತಿದೆ.

LEAVE A REPLY

Please enter your comment!
Please enter your name here