ವಿಕಾಸ್ ದುಬೆಯನ್ನು ರಕ್ಷಣೆ ಮಾಡಿದವರಿಗೆ ಯಾವ ಕ್ರಮ?; ಯುಪಿ ಸರ್ಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸಿದ ಪ್ರಿಯಾಂಕಾ.!

0
39

ನ್ಯೂಸ್ ಕನ್ನಡ ವರದಿ: ಕ್ರಿಮಿನಲ್ ವಿಕಾಸ್ ದುಬೆ ಎನ್‍ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆತನನ್ನು ರಕ್ಷಣೆ ಮಾಡಿದವರ ಕುರಿತು ಪ್ರಶ್ನಿಸಿದ್ದಾರೆ.

ವಿಕಾಸ್‍ದುಬೆ ಎನ್‍ಕೌಂಟರ್ ಬಳಿಕ ಟ್ವಿಟ್ ಮಾಡಿರುವ ಪ್ರಿಯಾಂಕಾ ಅವರು, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.

ಕ್ರಿಮಿನಲ್ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ. ಆದರೆ, ಆತನನ್ನು ರಕ್ಷಿಸಿದವರ ಕುರಿತು ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಅರ್ಥದಲ್ಲಿ ಟ್ವಿಟ್ ಮಾಡಿದ್ದಾರೆ. ಎಂಟು ಪೋಲೀಸರ ಹತ್ಯೆ ಪ್ರಕರಣವನ್ನು ನಿಭಾಯಿಸುವಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿಕಾಸ್ ದುಬೆ ವಿಚಾರಣೆ ಮುಂದುವರಿದಿದ್ದರೆ ಸರಣಿ ಪ್ರಕರಣಗಳು ಹೊರಬರುತ್ತಿದ್ದವು.

ಆತನೊಂದಿಗೆ ಸಂಪರ್ಕ ಹೊಂದಿದವರ ಮುಖವಾಡವೂ ಬಯಲಾಗುತ್ತಿತ್ತು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here