ಬಡವರ ಕಿಸೆಯಿಂದ ಹಣ ಕದ್ದ ಬಳಿಕ ಅವರ ಹೊಟ್ಟೆಗೆ ಹೊಡೆದಿದೆ: ಮೋದಿ ವಿರುದ್ಧ ಪ್ರಿಯಾಂಕ ಕಿಡಿ

0
34

ನ್ಯೂಸ್ ಕನ್ನಡ ವರದಿ: ಕಳೆದ ಐದೂವರೆ ವರ್ಷಗಳಲ್ಲೇ ಚಿಲ್ಲರೆ ಹಣದುಬ್ಬರ ಅತ್ಯಧಿಕ ಶೇ. 7.5ಗೆ ಏರಿಕೆಯಾಗಿರುವುದರ ಕುರಿತು ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಜೆಪಿ ಬಡವರ ಕಿಸೆಯಿಂದ ಹಣ ಕದ್ದ ಬಳಿಕ ಅವರ ಹೊಟ್ಟೆಗೆ ಹೊಡೆದಿದೆ ಎಂದಿದ್ದಾರೆ.

ತರಕಾರಿ ಹಾಗೂ ಆಹಾರ ಸಾಮಗ್ರಿಗಳ ಬೆಲೆ ಸಾಮಾನ್ಯ ಜನರ ಕೈಗೆ ಎಟಕುತ್ತಿಲ್ಲ. ತರಕಾರಿ, ಖಾದ್ಯ ತೈಲ, ಬೇಳೆಕಾಳು ಹಾಗೂ ಗೋಧಿ ವೆಚ್ಚದಾಯಕವಾದರೆ ಬಡವರು ತಿನ್ನುವುದು ಹೇಗೆ ? ಅಲ್ಲದೆ, ಆರ್ಥಿಕ ಕುಸಿತದಿಂದ ಜನರಿಗೆ ಕೆಲಸ ಕೂಡ ಸಿಗುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here