ಟೀಮ್ ಇಂಡಿಯಾಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹರಿಬಿಟ್ಟು, ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪೂನಂ ಪಾಂಡೆ!

0
719

ನ್ಯೂಸ್ ಕನ್ನಡ ವರದಿ (11-6-2019): ಸದಾ ಪಡ್ಡೆಹುಡುಗರ ನಿದ್ದೆಗೆಡಿಸುವ ಸಾಮಾಜಿಕ ಜಾಲತಾಣದ ಜನಪ್ರಿಯ ಮಾಡೆಲ್ ಪೂನಮ್‌ ಪಾಂಡೆ ಕ್ರಿಕೆಟ್‌ ಮತ್ತು ಟೀಮ್‌ ಇಂಡಿಯಾದ ಬಹುದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದಿದೆ. 2011ರ ವಿಶ್ವಕಪ್‌ ಟೂರ್ನಿ ವೇಳೆ ಭಾರತ ತಂಡ ಟ್ರೋಫಿ ಗೆದ್ದರೆ ನಗ್ನ ಫೋಟೊ ಪ್ರಕಟಿಸುವುದಾಗಿ ಹೇಳಿಕೆ ನೀಡಿ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ್ದ ಪೂನಮ್‌ ಪಾಂಡೆ, ಈಗ ಅಂತಹದ್ದೇ ಕೆಲಸಕ್ಕೆ ಕೈಹಾಕಿದ್ದಾರೆ.

ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 36 ರನ್‌ಗಳ ಜಯ ದಾಖಲಿಸಿದ ಬಳಿಕ, ಪೂನಮ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ ಖಾತೆಗಳ ಮೂಲಕ ಟೀಮ್‌ ಇಂಡಿಯಾಗೆ ತಮ್ಮ ಅರೆನಗ್ನ ಚಿತ್ರವೊಂದನ್ನು ಸಮರ್ಪಿಸಿದ್ದಾರೆ. “ನ್ಯೂ ಪಿಕ್‌ ಫಾರ್‌ ಟೀಮ್‌ ಇಂಡಿಯಾ” ಎಂದು ಅಡಿಬರಹವನ್ನೂ ಬರೆದಿದ್ದಾರೆ.

LEAVE A REPLY

Please enter your comment!
Please enter your name here