ಪಾಕಿಸ್ಥಾನದ ವಲ್ಡ್ ಕಪ್ ಜಾಹೀರಾತಿಗೆ, ಪೂನಂ ಪಾಂಡೆಯ ‘ವಿಶಿಷ್ಟ’ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಾದ್ಯಂತ ವೈರಲ್!

0
1138

ನ್ಯೂಸ್ ಕನ್ನಡ ವರದಿ (15-6-2019): ಪಾಕಿಸ್ತಾನಿ ಮಾಧ್ಯಮಗಳ ಕಪ್ ಜಾಹಿರಾತಿನಲ್ಲಿ ಭಾರತೀಯ ಯೋಧ ಅಭಿನಂದನ್ ಅವರನ್ನು ಗೇಲಿ ಮಾಡಿದ್ದಾರೆ ಎಂದು ಭಾರತೀಯರು ಬಹಳ ಕುಪಿತಗೊಂಡಿದ್ದರು. ಈಗ ಮಾಡೆಲ್ ಪೂನಂ ಪಾಂಡೆ ಪಾಕಿಗಳ ತಲೆ ತಿರುಗುವಂತೆ ತಿರುಗೇಟು ನೀಡಿದ್ದಾರೆ.

ಪೂನಂ ಪಾಂಡೆ ತಮ್ಮದೇ ಆದ ‘ವಿಶಿಷ್ಟ’ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಭಾರತದ ಹೆಮ್ಮೆಯ ವೀರ ಯೋಧನನ್ನು ಅಪಹಾಸ್ಯ ಮಾಡಿದ್ದೀರಿ ಇದು ಸರಿಯಲ್ಲ. ಕೇವಲ ಕಾಫಿ ಕಪ್ ಗೇ ಏಕೆ ಖುಷಿ ಪಡುತ್ತೀರಿ.. ಡಬಲ್ ಡೀ ಕಪ್ ತೆಗೆದು ಕೊಳ್ಳಿ. ನೀವು ಇದರಲ್ಲಿ ಟೀ ಕೂಡ ಕುಡಿಯಬಹುದು ಎಂದು ಕಾಫಿ ಕಪ್ ಬದಲಿಗೆ ತಮ್ಮ ಒಳ ಉಡುಪನ್ನು (ಬ್ರಾ) ಬಿಚ್ಚಿ ನೀಡುತ್ತಾರೆ. ಕಾಫಿ ಕಪ್ ಬದಲಿಗೆ ಡಿ ಕಪ್ ತೆಗೆದುಕೊಳ್ಳಿ, ಆದರೆ ವಿಶ್ವಕಪ್ ನಮಗೇ ಎಂದು ತಿರುಗೇಟು ನೀಡಿದ್ದಾರೆ. ಪೂನಂ ಪಾಂಡೆಯ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ. ಈ ಹಿಂದೆ ಭಾರತ ಜಯಗಳಿಸಿದ್ದಕ್ಕೆ ಅರೆ ನಗ್ನ ವೀಡಿಯೊ ಹಾಕಿ ಭಾರಿ ಸಂಚಲನ ಮೂಡಿಸಿದ್ದರು.

ವೀಡಿಯೊ ವೀಕ್ಷಿಸಿ:

LEAVE A REPLY

Please enter your comment!
Please enter your name here