20ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ: ಹೊಸ ನಿಯಮದೊಂದಿಗೆ 4 ಹಂತರ ಲಾಕ್‌ಡೌನ್‌ ಘೋಷಣೆ

0
94

ನ್ಯೂಸ್ ಕನ್ನಡ ವರದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೇಶದ 130 ಕೋಟಿ ಜನತೆಯನ್ನುದ್ದೇಶಿಸಿ ಮಾತನಾಡಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

ಹೌದು… ಭಾರತದ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಸ್ವಾವಲಂಭಿ ಭಾರತಕ್ಕೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಈ 6 ವರ್ಷದಲ್ಲಿ ಹಲವಾರು ಬದಲಾವಣೆಗಳು ಆಗಿವೆ. 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ನಲ್ಲಿ ಕೈಗಾರಿಕೆಗಳಿಗೆ, ಲ್ಯಾಂಡ್ , ಲೇಬರ್, ಗೃಹ, ಕುಟೀರು ಉದ್ಯೋಗಿಗಳಿಗೆ, ಲಘು ಉದ್ಯೋಗಿಗಳಿಗೆ, ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಗಳಿಗೆ, ಭಾರತೀಯ ಉದ್ಯೋಗದಾತರಿಗೆ ಈ ಪ್ಯಾಕೇಜ್ ನೆರವಾಗಲಿದೆ. ದೇಶದ ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಕ್ಷೇತ್ರದ ಜನರಿಗೆ ಈ ಪ್ಯಾಕೇಜ್ ಸಹಕಾರಿಯಾಗಲಿದೆ.

ಇದು 2020 ದೇಶದ ಅಭಿವೃದ್ಧಿ ಯಾತ್ರೆಗೆ ಪೂರಕವಾಗಲಿದೆ. ದೇಶದ ವಿಕಾಸಕ್ಕೆ ಪೂರಕವಾಗಿದೆ. ದೇಶದ ಉದ್ಯೋಗಿಗಳ ಬಲ ಸಮರ್ಥನೆಗೆ ಸಹಯಕವಾಗಲಿದೆ. ಭಾರತ ಬದಲಾವಣೆಗೆ ಮತ್ತೊಂದು ಹಂತ ತಲುಪಬೇಕಾಗಿದೆ. ಎಲ್ಲವೂ ಬಂದ್ ಇದ್ದಾಗಲೂ ರೈತರಿಗೆ ಆರ್ಥಿಕ ನೆರವು ಸಿಕ್ಕಿದೆ. ತೆರಿಗೆ ಪಾವತಿಸುತ್ತಿರುವ ವರ್ಗಕ್ಕೆ ಈ ಪ್ಯಾಕೇಜ್ ನೆರವಾಗಲಿದೆ. ಇವತ್ತು ಭಾರತ ಎಲ್ಲಾ ಸ್ಪರ್ಧೆಯಲ್ಲೂ ಗೆಲ್ಲಬೇಕು ಎನ್ನುವ ಬೇಡಿಕೆ ಇದೆ. ಎಲ್ಲ ಕ್ಷೇತ್ರಕ್ಕೂ ಸಹಕಾರಿಯಾಗುವಂತಹ ಪ್ಯಾಕೇಜ್ ಇದು ಎಂದಿದ್ದಾರೆ.

ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ 5 ನೇ ಬಾರಿಗೆ ಭಾಷಣ ಮಾಡಿದ ಅವರು, ಸ್ವದೇಶಿ ವಸ್ತುಗಳ ತಯಾರಿಕೆ ಮತ್ತು ಪೂರೈಕೆಗೆ ಪ್ಯಾಕೇಜಿನಲ್ಲಿ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ 4 ನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ ಮೋದಿ, 4ನೇ ಹಂತದ ಲಾಕ್ ಡೌನ್ ಸಂಪೂರ್ಣವಾಗಿ ಹೊಸದಾಗಿರುತ್ತದೆ. ಲಾಕ್ ಡೌನ್ 4 ಹೊಸ ರೂಪ ಮತ್ತು ಹೊಸ ನಿಯಮದೊಂದಿಗೆ ಬರಲಿದೆ. ಮೇ 18 ಕ್ಕೆ ಮೊದಲು ಲಾಕ್ ಡೌನ್ ನಿಯಮ ತಿಳಿಸಲಾಗುವುದು. ಕೊರೋನಾ ವಿರುದ್ಧದ ಹೋರಾಟ ಸುದೀರ್ಘವಾಗಿರುತ್ತದೆ. ಇದಕ್ಕಾಗಿ ಲಾಕ್ಡೌನ್ ಮುಂದುವರಿಸುವುದು ಅನಿವಾರ್ಯವಾಗಿದ್ದು, ಹೊಸ ರೂಪ ಹೊಸ ನಿಯಮದೊಂದಿಗೆ ಲಾಕ್ಡೌನ್ 4 ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here