ನಾನು ದೇಶ ಯಾವತ್ತೂ ತಲೆತಗ್ಗಿಸುವಂತೆ ಮಾಡಲು ಅವಕಾಶ ನೀಡಲ್ಲ: ಪ್ರತಿದಾಳಿ ನಂತರ ಪ್ರಧಾನಿ ಪ್ರತಿಕ್ರಿಯೆ

0
498

ನ್ಯೂಸ್ ಕನ್ನಡ ವರದಿ: ರಾಜಸ್ಥಾನದಲ್ಲಿ ನಡೆದ ವಿಜಯ್ ಸಂಕಲ್ಪ ಯಾತ್ರೆಯಲ್ಲಿ ಏರ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಮೊದಲ ಬಾರಿ ಪ್ರಧಾನಿ ಮೋದಿ ಭಾರತ ಮಾತೆಯನ್ನು ಎಂದಿಗೂ ತಲೆತಗ್ಗಿಸಲು ಬಿಡಲ್ಲ , ಈ ಮೂಲಕ ನಾನು ಭಾರತ ಮಾತೆಗೆ ವಚನ ನೀಡುತ್ತಿದ್ದೇನೆ ಎಂದು ಹೇಳಿದರು. ದೇಶ ಸುರಕ್ಷಿತ ಕೈಗಳಲ್ಲಿ ಭದ್ರವಾಗಿದೆ. ನಾವೆಲ್ಲರೂ ಪರಾಕ್ರಮಿ ಯೋಧರಿಗೆ ನಮನ ಸಲ್ಲಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಶತ್ರು ದೇಶದೊಳಗೆ ನುಗ್ಗಿ ಭಾರತೀಯ ವಾಯುಪಡೆ ಯೋಧರು ನಡೆಸಿದ ದಾಳಿ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ್ ಮಾತಾ ಕಿ ಜೈ ಎಂದು ರಾಜಸ್ತಾನದ ಚುರುವಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶ ಸೇನೆಯ ಸುರಕ್ಷಿತ ಕೈಗಳಲ್ಲಿದೆ. ನಾವೆಲ್ಲರೂ ಪರಾಕ್ರಮಿ ಯೋಧರಿಗೆ ನಮನ ಸಲ್ಲಿಸೋಣ ಎಂದರು. ನಾನು ಯಾವತ್ತೂ ದೇಶವನ್ನು ತಲೆತಗ್ಗಿಸುವಂತೆ ಮಾಡಲು ಅವಕಾಶ ನೀಡಲ್ಲ. ಚುರು ನೆಲದಲ್ಲಿ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಭಾರತ ಮಾತೆಗೆ ನಾನು ಮಾತು ಕೊಡುತ್ತಿದ್ದೇನೆ. ಭಾರತ ಮಾತೆ ಎಂದಿಗೂ ತಲೆ ತಗ್ಗಿಸುವಂತೆ ಮಾಡಲ್ಲ ಎಂದು ಹೇಳಿದರು. ನಿಂತಲ್ಲಿ ನಿಲ್ಲಲು ಬಿಡುವುದಿಲ್ಲ, ದೇಶವನ್ನು ತಲೆ ಬಾಗಲು ಬಿಡುವುದಿಲ್ಲ. ನಮ್ಮ ದೇಶಕ್ಕಿಂತ ಮುಖ್ಯ ಇನ್ನೇನು ಇಲ್ಲ. ದಾರಿ ತಪ್ಪುವುದಿಲ್ಲ, ಭಾರತ ದೇಶ ಯಾವತ್ತಿಗೂ ಶರಣಾಗಲು ಬಿಡುವುದಿಲ್ಲ. ನನಗೆ ದೇಶಕ್ಕಿಂತ ಹೆಚ್ಚು ಇನ್ನಾವುದೇ ವಿಚಾರ ಇಲ್ಲ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here