ಕೊರೊನ ವಿರುದ್ಧ ಹೋರಾಟದಲ್ಲಿ ಭಾರತವು ಇತರ ರಾಷ್ಟ್ರಗಳಿಗಿನ್ನ ಮುಂದಿದೆ: ಪಿಎಂ ಮೋದಿ

0
73

ನ್ಯೂಸ್ ಕನ್ನಡ ವರದಿ: ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಇತರ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಡಾ.ಜೋಸೆಫ್ ಮಾರ್ ಥೋಮಾ ಮೆಟ್ರೋಪಾಲಿಟನ್ ಅವರ 90 ನೇ ಜನ್ಮದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ ಈ ರೋಗದ ವಿರುದ್ಧ ಜಗತ್ತು ಪ್ರಬಲ ಹೋರಾಟ ನಡೆಸುತ್ತಿದೆ. ಜನರ ಜೀವನಕ್ಕೆ ಅಪಾಯ ತಂದೊಡ್ಡುವ COVID-19 ದೈಹಿಕ ಕಾಯಿಲೆ ಮಾತ್ರವಲ್ಲ. ಇದು ಅನಾರೋಗ್ಯಕರ ಜೀವನಶೈಲಿಯತ್ತಲೂ ನಾವು ಗಮನಹರಿಸುವಂತೆ ಮಾಡುತ್ತದೆ ಎಂದು ಅವರು ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು.

ಈ ವರ್ಷದ ಆರಂಭದಲ್ಲಿ, ಭಾರತದಲ್ಲಿ ವೈರಸ್ ಪರಿಣಾಮವು ತೀವ್ರವಾಗಿರುತ್ತದೆ ಎಂದು ಕೆಲವರು ಊಹಿಸಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಮತ್ತು ಸರ್ಕಾರ ಕೈಗೊಂಡ ಹಲವಾರು ಉಪಕ್ರಮಗಳು ಮತ್ತು ರೋಗದ ವಿರುದ್ಧದ ಹೋರಾಟದಲ್ಲಿ ಜನರ ಸಹಭಾಗಿತ್ವ, ಕರೊನಾ ಸೇನಾನಿಗಳ ಪ್ರಬಲ, ತ್ಯಾಗಮಯ ಕಾರ್ಯದಿಂದಾಗಿ, ಭಾರತವು ಇತರ ರಾಷ್ಟ್ರಗಳಿಗಿಂತ ಹೆಚ್ಚು ಉತ್ತಮ ಸ್ಥಾನದಲ್ಲಿದೆ. ಚೇತರಿಕೆ ಪ್ರಮಾಣ ಏರುತ್ತಿದೆ ಎಂದರು.

LEAVE A REPLY

Please enter your comment!
Please enter your name here