ರಾಜ್ಯದಲ್ಲಿ 124 ಪೋಲಿಸರಿಗೆ ಕೊರೊನ ಪಾಸಿಟಿವ್: 17 ಪೋಲಿಸ್ ಠಾಣೆ ಸೀಲ್ ಡೌನ್

0
57

ನ್ಯೂಸ್ ಕನ್ನಡ ವರದಿ: ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದಲ್ಲಿನ ಅನೇಕ ಠಾಣೆಯ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯಾದ್ಯಂತ ಇದುವರೆಗೆ 124 ಪೊಲೀಸರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾದಂತ ರಾಜ್ಯದ 17 ಪೊಲೀಸ್ ಠಾಣೆಗಳು ಕಂಪ್ಲೀಟ್ ಸೀಲ್ ಡೌನ್ ಕೂಡ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ರಾಜ್ಯದಲ್ಲಿ ಈವರೆಗೆ 124 ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 60 ಕೊರೋನಾ ಸೋಂಕಿತ ಪೊಲೀಸರು ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಇನ್ನೂ 64 ಕೊರೋನಾ ಸೋಂಕಿತ ಪೊಲೀಸರು ಗುಣಮುಖರಾಗಬೇಕಿದೆ ಎಂಬುದಾಗಿ ತಿಳಿಸಿದರು.

ಅಂದಹಾಗೇ, ಈವರೆಗೆ ಕೊರೋನಾ ಸೋಂಕಿನಿಂದಾಗಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.

2 ಸಾವಿರಕ್ಕಿಂತ ಹೆಚ್ಚು ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ರಾಜ್ಯಾದ್ಯಂತ 17 ಪೊಲೀಸ್ ಠಾಣೆಗಳು ಕಂಪ್ಲೀಟ್ ಸೀಲ್ ಡೌನ್ ಕೂಡ ಮಾಡಲಾಗಿದೆ ಎಂಬುದಾಗಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here