NRC ವಿರೋಧಿಸಿ ಪ್ರಶಾಂತ್ ಕಿಶೋರ್ ಟ್ವೀಟ್; ಬಿಹಾರ ಸಿಎಂ ಮಹತ್ವದ ನಿರ್ಧಾರ, ಬಿಜೆಪಿಗೆ ಮುಖಭಂಗ!

0
36

ನ್ಯೂಸ್ ಕನ್ನಡ ವರದಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪೌರತ್ವ ಕಾಯ್ದೆ ಹಾಗೂ NRC ಸಂಬಂಧ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಪೌರತ್ವ ಕಾಯ್ದೆ ಸಂಬಂಧ ಮಾತುಕತೆ ನಡೆಯಬೇಕು. ಆದರೆ ಯಾವುದೇ ಕಾರಣಕ್ಕೂ NRC ಜಾರಿಗೊಳಿಸಲು ಬಿಡುವುದಿಲ್ಲ ಎಂದಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ NRC ಸಂಬಂಧ ಈ ಹಿಂದಿನಿಂದಲೂ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಿದ್ದರೂ ಅವರ ಪಕ್ಷದ ಕೆಲ ನಾಯಕರು ಪೌರತ್ವ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಇನ್ನು ಭಾನುವಾರದಂದು ಜೆಡಿಯು ನಾಯಕ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡುತ್ತಾ ಬಿಹಾರದಲ್ಲಿ NRC ಹಾಗೂ ಪೌರತ್ವ ಕಾಯ್ದೆ ಜಾರಿಯಾಗುವುದಿಲ್ಲ ಎಂದಿದ್ದರು. ಈ ವಿಚಾರ ಸಿಎಂ ನಿತೀಶ್ ಕುಮಾರ್ ನಿತೀಶ್ ಕುಮಾರ್ ರನ್ನು ಭಾರೀ ಇಕ್ಕಟ್ಟಿಗೀಡು ಮಾಡಿತ್ತು.

ಈ ಹಿಂದೆ ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪೌರತ್ವ ಕಾಯ್ದೆ ಹಾಗೂ NRC ಬಹಿಷ್ಕರಿಸುವ ನಿರ್ಧಾರವನ್ನು ಸ್ವಾಗತಿಸಿದ್ದರು. ಇದಕ್ಕಾಗಿ ಅವರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಧನ್ಯವಾದ ತಿಳಿಸಿದ್ದರು ಹಾಗೂ ಬಿಹಾರದಲ್ಲಿ NPR ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದರು.

ಈಗ ಇದೆ ಬೆನ್ನಲ್ಲಿ ಪ್ರಶಾಂತ್ ಕಿಶೋರ್ ಮಾಡಿರುವ ಈ ಟ್ವೀಟ್ ಸಿಎಂ ನಿತೀಶ್ ಕುಮಾರ್ ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬುವುದು JDU ನಾಯಕರ ಅಭಿಪ್ರಾಯವಾಗಿದೆ. ಯಾಕೆಂದರೆ ನಿತೀಶ್ ಕುಮಾರ್ NPR ಜಾರಿಗೊಳಿಸದಿದ್ದರೆ ಬಿಜೆಪಿ ನಾಯಕರ ಆಕ್ರೋಶಕ್ಕೀಡಾಗುತ್ತಾರೆ. ಒಂದು ವೇಳೆ ಜಾರಿಗೊಳಿಸಿದರೆ ಕುರ್ಚಿಗಾಗಿ ಒಂದು ಹೆಜ್ಜೆ ಮುಂದಿಟ್ಟು, ಎರಡು ಹೆಜ್ಜೆ ಹಿಂದಿಡುವ ಅವರ ನಡವಳಿಕೆ ಮುಂದುವರೆಸಿದಂತಾಗುತ್ತದೆ. ಅಂತಿಮ ಕ್ಷಣದಲ್ಲಿ ಯೂ ಟರ್ನ್ ಹೊಡೆಯುವ ಆರೋಪ ಅವರ ಮೇಲೆ ಈ ಮೊದಲಿನಿಂದಲೂ ಇದೆ.

ಸದ್ಯ ದೀರ್ಘ ಮೌನದ ಬಳಿಕ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್ NRC ಜಾರಿಗೊಳಿಸುವ ಮಾತೇ ಇಲ್ಲ ಎಂದಿದ್ದರೂ ಪೌರತ್ವ ಕಾಯ್ದೆ ಕುರಿತು ರಾಜ್ಯ ಸರ್ಕಾರಗಳು ಮಾತನಾಡುವಂತಿಲ್ಲ. ಏನೇ ಆದರೂ ಸಂಸತ್ತು ನಿರ್ಧರಿಸುತ್ತೆ. ಈ ಕುರಿತು ಏನೇ ಮಾತನಾಡುವುದಿದ್ದರೂ ಜನವರಿ 19ರ ಬಳಿಕ ಮಾತನಾಡುತ್ತೇನೆ. NPR ಸಂಬಂಧ ಹೆಚ್ಚು ಮಾಹಿತಿ ಇಲ್ಲ, ಈ ಕುರಿತು ವರದಿ ಕೇಳಿದ್ದೇನೆ ಎಂದಿದ್ದಾರೆ.

ಇನ್ನು ಪ್ರಶಾಂತ್ ಕಿಶೋರ್ ವರ್ತನೆ ಹಾಗೂ ಟ್ವೀಟ್ ಆಡಳಿತಾಡೂಢ NDA ಮೈತ್ರಿ ಕೂಟದಲ್ಲಿ ಆತಂಕ ಹುಟ್ಟು ಹಾಕಿದೆ.

LEAVE A REPLY

Please enter your comment!
Please enter your name here