ಭಾರತ-ಪಾಕಿಸ್ತಾನ ಸಂಬಂಧ ಸರಿಹೋದರೆ ಪಾಕಿಸ್ತಾನದ ಭವಿಷ್ಯ ಉತ್ತಮವಾಗಿರುತ್ತದೆ: ಇಮ್ರಾನ್ ಖಾನ್

0
60

ನ್ಯೂಸ್ ಕನ್ನಡ ವರದಿ: ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಂದರೆ ಡಬ್ಲ್ಯುಇಎಫ್‌ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ಭಾರತದೊಂದಿಗಿನ ಪಾಕಿಸ್ತಾನದ ಸಂಬಂಧಗಳು ಸರಿಹೋದರೆ ಅದು ಪಾಕಿಸ್ತಾನದ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ, ದುರದೃಷ್ಟವಶಾತ್ ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಾಗಿ ಇಲ್ಲದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಾಂತಿ ಮತ್ತು ಸ್ಥಿರತೆ ಇಲ್ಲದೆ ಯಾವುದೇ ದೇಶ ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ ಇಮ್ರಾನ್ ಖಾನ್, ಕೇವಲ ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ ಬೇರೆ ಯಾವುದೇ ದೇಶದ ಜೊತೆಗೆ ಪಾಲುದಾರಿಕೆ ಮಾಡಲು ಸಿದ್ಧವಿದೆ ಎಂದು ಹೇಳಿದರು.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಷಣ ಮಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದ ಚಿತ್ರಣ ಹದಗೆಟ್ಟಿದೆ. ಹೀಗಾಗಿ ‘ಯಾರೂ ಪಾಕಿಸ್ತಾನಕ್ಕೆ ಬರಲು ಇಷ್ಟಪಡುತ್ತಿಲ್ಲ’ ಎಂಬುದನ್ನು ಒಪ್ಪಿಕೊಂಡರು.

ಭಯೋತ್ಪಾದನೆ ನಿರ್ಮೂಲನೆ ತನ್ನ ಆದ್ಯತೆಯೆಂದು ಭರವಸೆ ನೀಡಿದ ಇಮ್ರಾನ್ ಖಾನ್, “ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಪುನರ್ವಸತಿ ಕಲ್ಪಿಸಿದ ಮೊದಲ ಸರ್ಕಾರ ಇದಾಗಿದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ನಾವು ಬದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here