ಯುವ ಆಟಗಾರ ಪೃಥ್ವಿ ಶಾ ಫೋಟೊ ಬಳಸಿದ ಕಂಪೆನಿಗಳಿಗೆ 1ಕೋಟಿ ರೂ. ದಂಡ!

0
304

ನ್ಯೂಸ್ ಕನ್ನಡ ವರದಿ : ಇತ್ತೀಚೆಗಷ್ಟೇ ರಾಜ್‌ಕೋಟ್‌ನಲ್ಲಿ ಮುಕ್ತಾಯವಾಗಿದ್ದ ವಿಂಡೀಸ್ ವಿರುದ್ಧದ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, ಅದೇ ಪಂದ್ಯದಲ್ಲಿಭರ್ಜರಿ ಶತಕ ಬಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಉಪಹಾರ ಕಂಪನಿ ಸ್ವಿಗ್ಗಿ ಹಾಗೂ ಫ್ರಿಚಾರ್ಜ್ ಕಂಪನಿಗಳು, ಪೃಥ್ವಿಗೆ ಅಭಿನಂದನೆ ತಿಳಿಸುವುದಕ್ಕಾಗಿ ಅವರ ಫೋಟೋಗಳನ್ನು ಬಳಸಿ ಯಡವಟ್ಟು ಮಾಡಿಕೊಂಡಿವೆ. ಈ ಯಡವಟ್ಟಿಗೆ ಎರಡೂ ಕಂಪನಿಗಳು ತಲಾ 1 ಕೋಟಿ ದಂಡ ತೆರಬೇಕಾಗಿದೆ. ಪೃಥ್ವಿ, ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುವ ಬೇಸ್ ಲೈನ್ ಕಂಪನಿ, ‘ಅನುಮತಿಯಿಲ್ಲದೆ ಟ್ವೀಟರ್ ನಲ್ಲಿ ಪೃಥ್ವಿ ಶಾ ಫೋಟೊಗಳನ್ನು ಬಳಸಿದ್ದಕ್ಕಾಗಿ ತಲಾ ಒಂದು ಕೋಟಿ ದಂಡ ನೀಡಬೇಕು’ ಎಂದು ನೋಟೀಸ್ ನೀಡಲಾಗಿದೆ.

ಇದು ಈ ಎರಡೂ ಕಂಪನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ಆಟಗಾರರಿಗೆ ಮಾಡಿದ ಅನ್ಯಾಯ ಮಾತ್ರವಲ್ಲ ಜೊತೆಗೆ ಆಟಗಾರನ ಪ್ರಾಯೋಜಕತ್ವದ ಸಂಸ್ಥೆಗೂ ಮಾಡಿದ ಅನ್ಯಾಯ ವಾಗಿದೆ. ಎರಡೂ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆ ಯ ವ್ಯವಸ್ಥಾಪಕ ನಿರ್ದೇಶಕ ತುಹಿನ್ ಮಿಶ್ರಾ ಹೇಳಿದ್ದಾರೆ. ಸ್ವಿಗ್ಗಿ, ಫ್ರೀಚಾರ್ಜ್, ಡ್ಯುರೆಕ್ಸ್ ಕಾಂಡೋಮ್ ಸೇರಿದಂತೆ ಹಲವು ಕಂಪೆನಿಗಳು ಪೃಥ್ವಿ ಶಾ ಶತಕವನ್ನು ಬಳಸಿಕೊಂಡಿತ್ತು. ಈ ಮೂಲಕ ತಮ್ಮ ಬ್ರ್ಯಾಂಡ್ ಪ್ರಮೋಶನ್ ನಡೆಸಿತ್ತು. ಇದೀಗ ಈ ಕಂಪೆನಿಗಳಿಗೆ ಬಿಸಿ ಮುಟ್ಟಿದೆ.

LEAVE A REPLY

Please enter your comment!
Please enter your name here