ಯೆಸ್​ ಬ್ಯಾಂಕ್​ ದಿವಾಳಿ: ಫೋನ್​ ಪೇ ಗ್ರಾಹಕರಿಗೂ ಸಂಕಷ್ಟ.!

0
162

ನ್ಯೂಸ್ ಕನ್ನಡ ವರದಿ: ಯೆಸ್​ ಬ್ಯಾಂಕ್​ ಗ್ರಾಹಕರಿಗೆ ಸಂಕಷ್ಟದ ಕಾಲ ಶುರುವಾಗಿದೆ. ಯೆಸ್​ ಬ್ಯಾಂಕ್​ನಲ್ಲಿ ವ್ಯವಹಾರ ನಿನ್ನೆ ಸಂಜೆಯಿಂದಲೇ ಸ್ಥಗಿತವಾಗಿದೆ. ಯೆಸ್​ ಬ್ಯಾಂಕ್​​ಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಲ ವಸೂಲಿ ಮಾಡಲಾಗದೇ ದಿವಾಳಿಯಾಗಿದೆ. ಇದೀಗ ಯೆಸ್​ ಬ್ಯಾಂಕ್​ ಮೇಲೆ ಆರ್​ಬಿಐ ನಿಗಾ ಇರಿಸಿದ್ದು, ಎಲ್ಲಾ ವ್ಯವಹಾರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ತಾತ್ಕಾಲಿಕವಾಗಿ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ ಯೆಸ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿ ರದ್ದು ಮಾಡಿ ಸೂಪರ್ ಸೀಡ್​ ಆದೇಶ ಮಾಡಲಾಗಿದೆ.

ಯೆಸ್​ ಬ್ಯಾಂಕ್​ನಲ್ಲಿ​ ವಸೂಲಿಯಾಗದ 10 ಸಾವಿರ ಕೋಟಿ ಸಾಲ ಇದೆ. ಯೆಸ್​ ಬ್ಯಾಂಕ್​ನ ಇಂದಿನ ಮಾರುಕಟ್ಟೆ ಮೌಲ್ಯ 9,398 ಕೋಟಿ ಆಗಿದೆ. ಬ್ಯಾಂಕ್​ ವಹಿವಾಟು ನಡೆಸಲು ₹ 14 ಸಾವಿರ ಕೋಟಿ ಬೇಕಾಗಿದೆ.

ಮಾರ್ಚ್​ 5 ರಿಂದ ಏಪ್ರಿಲ್​ 3 ವರೆಗೆ ಕೇವಲ 50 ಸಾವಿರ ರೂಪಾಯಿ ಹಣವನ್ನು ಮಾತ್ರ ಗ್ರಾಹಕರು ಡ್ರಾ ಮಾಡಬಹುದಾಗಿದೆ. ಅದೂ ಕೂಡ ಬ್ಯಾಂಕ್​ನಿಂದಲೇ ನೇರವಾಗಿ ಹಣ ಡ್ರಾ ಮಾಡಬೇಕು. ನಿಮ್ಮದೇ ಬೇರೆ ಬ್ಯಾಂಕ್​​ ಅಕೌಂಟ್​ಗೆ ಹಣ ಟ್ರಾನ್ಸ್​ಫರ್ ಮಾಡುವ ಚಿಂತನೆಯಲ್ಲಿದ್ದರೆ ಬಿಟ್ಟುಬಿಡಿ. ಯಾಕಂದ್ರೆ ಹಣ ಬೇರೆ ಬ್ಯಾಂಕ್​ಗೆ ಟ್ರಾನ್ಸ್​ಫರ್​ ಆಗಲ್ಲ, ಎಟಿಎಂನಿಂದಲೂ ಹಣ ತೆಗೆಯಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನಿಮ್ಮ ಹಣವನ್ನು ಬೇರೆ ಯಾವುದೇ ರೀತಿ ತೆಗೆದುಕೊಳ್ಳಲು ಆಗುವುದಿಲ್ಲ. ಬ್ಯಾಂಕ್​ಗೆ ಭೇಟಿ ಕೊಟ್ಟು ಹಣ ತೆಗೆಯಬೇಕು ಎನ್ನುವ ನಿರ್ಧಾರ ಮಾಡಿದ್ದರೂ ಇನ್ನೊಂದು ಅಡ್ಡಿಯಿದೆ. ನಿಮ್ಮದು ಬ್ಯಾಂಕ್​ನಲ್ಲಿ ಯಾವುದಾದರೂ ಲೋನ್​ ಇದ್ದರೆ, ನಿಮ್ಮ ಸೇವಿಂಗ್​ ಬ್ಯಾಂಕ್​ ಖಾತೆಯ ಹಣವನ್ನು ತೆಗೆಯಲು ಸಾಧ್ಯವಿಲ್ಲ. ನಿನ್ನೆವರೆಗಿನ ಚೆಕ್​​, ಡಿಡಿ ಮಾತ್ರ ಪಾಸ್ ಆಗುತ್ತವೆ. ಹೊಸದಾಗಿ ಚೆಕ್​ ಬುಕ್​ ಕೂಡ ಕೊಡಲ್ಲ.

ವೈದ್ಯಕೀಯ ಚಿಕಿತ್ಸೆ ಮದುವೆ ಕಾರ್ಯಕ್ರಮ, ಉನ್ನತ ಶಿಕ್ಷಣ ಕೈಗೊಳ್ಳಲು ಹೆಚ್ಚಿನ ಹಣ ಡ್ರಾ ಮಾಡಬಹುದು. ಆದರೆ ಆ ಹಣ ಗರಿಷ್ಠ 5 ಲಕ್ಷ ಮೀರಿರಬಾರದು. ಪಂಜಾಬ್​ ನ್ಯಾಷನಲ್​ ಕೋ ಆಪರೇಟಿವ್​ ಹಾಗು ಬೆಂಗಳೂರಿನ ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ ಬಳಿಕ ದಿವಾಳಿ ಹಂತ ತಲುಪಿರುವ ಮೂರನೇ ಭಾರತದ ಬ್ಯಾಂಕ್​ ಯೆಸ್​​ ಬ್ಯಾಂಕ್​ ಆಗಿದೆ.

ಬ್ಯಾಂಕಿಂಗ್​ ಪಾರ್ಟರ್ನರ್​ ಆಗಿ ಯೆಸ್​ ಬ್ಯಾಂಕ್​ ಜೊತೆ ವ್ಯವಹಾರ ಮಾಡುತ್ತಿದ್ದ ಫೋನ್​ ಪೇ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಹಕರು ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಫೋನ್​ ಪೇ ಸಿಇಓ ಸಮೀರ್ ನಿಗಮ್ ಟ್ವೀಟ್​ ಮಾಡಿದ್ದಾರೆ.

LEAVE A REPLY

Please enter your comment!
Please enter your name here