ಇಳಿಕೆಯತ್ತ ಮುಖಮಾಡಿರುವ ತೈಲಬೆಲೆಗಳು, ಇಂದು ಮತ್ತೆ ಇಳಿಕೆ!

0
208

ನ್ಯೂಸ್ ಕನ್ನಡ ವರದಿ (16-6-2019): ಹಲವು ದಿನಗಳಿಂದ ಪೆಟ್ರೋಲ್ ದರವು ಇಳಿಮುಖವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಪೆಟ್ರೋಲ್‌ ಲೀ.ಗೆ 13 ಪೈಸೆ ಮತ್ತು ಡೀಸೆಲ್‌ ಲೀಟರ್‌ಗೆ 15 ಪೈಸೆಗಳಷ್ಟು ಇಳಿಕೆಯಾಗಿದೆ.

ಬೆಂಗಳೂರಲ್ಲಿ ಪೆಟ್ರೋಲ್‌ ಲೀಟರ್‌ಗೆ 13 ಪೈಸೆ ಕಡಿಮೆಯಾಗಿದ್ದು ಬೆಲೆ 72.29 ರೂ.ಆಗಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ ಇಳಿಕೆಯಾಗಿದ್ದು, ಲೀಟರ್‌ ಡೀಸೆಲ್‌ಗೆ 65.99 ರೂ.ಗಳಷ್ಟಿದ್ದು, ನಿನ್ನೆಗೆ ಹೋಲಿಸಿದರೆ 15 ಪೈಸೆ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀ. ಪೆಟ್ರೋಲ್‌ಗೆ 06 ಪೈಸೆ ಕಡಿಮೆಯಾಗುವ ಮೂಲಕ 69.93 ರೂ., ಡೀಸೆಲ್‌ ಲೀ.ಗೆ 09 ಪೈಸೆ ಇಳಿಕೆ ಕಂಡು 63.84 ರೂ. ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಕೂಡ ಬೆಲೆ ಇಳಿಕೆಯಾಗಿದ್ದು, ಪೆಟ್ರೋಲ್‌ ಲೀ.ಗೆ 06 ಪೈಸೆ ಕಡಿಮೆಯಾಗಿ 75.63 ರೂ.ಗೆ ಮಾರಾಟವಾಗುತ್ತಿದೆ. ಇತ್ತ ಡೀಸೆಲ್‌ ಬೆಲೆಯಲ್ಲಿ 10 ಪೈಸೆ ಕಡಿಮೆಯಾಗಿ 66.93 ರೂ.ಗಳಷ್ಟಿದೆ.

LEAVE A REPLY

Please enter your comment!
Please enter your name here