ಅಲ್ಪ ಪ್ರಮಾಣದ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ದರಗಳು!

0
87

ನ್ಯೂಸ್ ಕನ್ನಡ ವರದಿ (15.5.19): ಪೆಟ್ರೋಲ್, ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಇಳಿಕೆಯಾಗಿ, ದರ 71.18 ರೂ ಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 12 ಪೈಸೆಗಳ ಇಳಿಕೆಯೊಂದಿಗೆ 65.86ರೂ ಆಗಿದೆ. ದೇಶದೆಲ್ಲೆಡೆ ರಾಜ್ಯಗಳಿಗನುಸಾರ ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ಇಳಿಕೆ ಕಂಡಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರಲ್ಲಿ 26 ಪೈಸೆಯಷ್ಚು ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 73.47 ರೂಗೆ ಕಡಿತವಾಗಿದೆ. ಇನ್ನು ಡೀಸೆಲ್ ದರದಲ್ಲಿ ಕೂಡ 12 ಪೈಸೆ ಇಳಿಕೆಯಾಗಿ ಡೀಸೆಲ್‌ ದರ 67.98 ರೂ ಗಳಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 24 ಪೈಸೆ ಕಡಿತವಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್‌ ದರ 76.77 ರೂ ಗಳಾಗಿದೆ. ಡೀಸೆಲ್ ದರದಲ್ಲಿ 12 ಪೈಸೆ ಇಳಿಕೆಯಾಗಿ 68.98 ರೂಗಳಾಗಿದೆ.

LEAVE A REPLY

Please enter your comment!
Please enter your name here