ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ!

0
2009

ನ್ಯೂಸ್ ಕನ್ನಡ ವರದಿ: ಮೋದಿ ಸರಕಾರದ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್​ಗೆ ಮಾರುಕಟ್ಟೆ ಆಧಾರಿತ ಬೆಲೆ ನಿಗದಿ ಪದ್ಧತಿಯನ್ನು ಜಾರಿಗೆ ತಂದಿದೆ. ಅದಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುತೇ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈಗ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಇಳಿಮುಖವಾಗುತ್ತಿದೆ. ಬುಧವಾರ ಮತ್ತೊಮ್ಮೆ ಪೆಟ್ರೋಲ್ ಡೀಸೆಲ್ ದರದಲ್ಲಿ ಕೆಲ ಪೈಸೆಗಳಷ್ಟು ಇಳಿಕೆಯಾಗಿದೆ.

ಕಳೆದ ಕೆಲ ದಿನಗಳಿಂದ ಇಳಿಯುತ್ತಿರುವ ಪೆಟ್ರೋಲ್ ಡೀಸೆಲ್ ದರದಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ. ಗುರುವಾರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ 7 ರಿಂದ 9 ಪೈಸೆಯಷ್ಟು ಇಳಿದಿದೆ. ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 8 ಪೈಸೆ ಇಳಿದಿದ್ದು, 70.35ರಷ್ಟಾಗಿದೆ. ಡೀಸೆಲ್ ದರ 6 ಪೈಸೆ ಇಳಿದು, 64.33ರು.ನಷ್ಟಾಗಿದೆ. ಇನ್ನು ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 8 ಪೈಸೆ ಇಳಿದಿದ್ದು, 76.04ರು.ನಷ್ಟಾಗಿದೆ. ಡೀಸೆಲ್ ದರ 6 ಪೈಸೆ ಇಳಿದಿದ್ದು, 66. 25 ರು.ನಷ್ಟಾಗಿದೆ.

LEAVE A REPLY

Please enter your comment!
Please enter your name here