ಸತತ 16ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

0
60

ನ್ಯೂಸ್ ಕನ್ನಡ ವರದಿ: ಭಾರತದಲ್ಲಿ ಕೊರೊನಾ ಲಾಕ್ ಡೌಣ್ ಸಡಿಲಿಕೆಯಾಗಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದ್ದು, ಇಂದೂ ಸಹ ಪೆಟ್ರೋಲ್ ಬೆಲೆ 33 ಪೈಸೆ, ಡೀಸೆಲ್ ಬೆಲೆ 58 ಪೈಸೆ ಏರಿಕೆಯಾಗಿದೆ.

ಸತತ 16 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಕಾಣುತ್ತಿದ್ದು, ಇಂಡಿಯನ್ ಆಯಿಲ್ ವೆಬ್ ಸೈಟ್ ಪ್ರಕಾರ, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 33 ಪೈಸೆ ಹೆಚ್ಚಳವಾಗಿ 79.56 ರೂ. ಡೀಸೆಲ್ ಬೆಲೆ 58 ರೂ. ಏರಿಕೆಯೊಂದಿಗೆ 78.85 ರೂ. ಆಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 34 ಪೈಸೆ ಹೆಚ್ಚಳವಾಗಿದ್ದು, 82.15 ಪೈಸೆ ಹಾಆಗೂ ಡೀಸೆಲ್ ದರ 55 ಪೈಸೆ ಹೆಚ್ಚಳವಾಗಿ 74.98 ರೂ. ತಲುಪಿದೆ.

LEAVE A REPLY

Please enter your comment!
Please enter your name here