ಮತ್ತೆ ಏರಿಕೆಯಾಯ್ತು ಪೆಟ್ರೋಲ್ ಡೀಸೆಲ್ ಬೆಲೆ

0
55

ನ್ಯೂಸ್ ಕನ್ನಡ ವರದಿ: ವಾಹನ ಸವಾರರಿಗೆ ಸತತ 19 ನೇ ದಿನವೂ ಬಿಗ್ ಶಾಕ್ ಎದುರಾಗಿದ್ದು, ಇಂದೂ ಸಹ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.

ಇಂದು ದೇಶದಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 14 ಪೈಸೆ ಹಾಗೂ ಪೆಟ್ರೋಲ್ ಬೆಲೆ 16 ಪೈಸೆ ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಡೀಸೆಲ್ ಬೆಲೆ 80.02 ರೂ. ಗೆ ತಲುಪಿದರೆ, ಪೆಟ್ರೋಲ್ ಬೆಲೆ 79.92 ರೂ.ಆಗಿದೆ.

ದೆಹಲಿ ಸರ್ಕಾರವುಉ ಮೇ ನಲ್ಲಿ ಇಂಧನಗಳ ಮೇಲೆ ಮೌಲ್ಯವರ್ಧಿತ ತೆರಿಗೆ ಹೆಚ್ಚಿಸಿದ್ದರಿಂದ ಡೀಸೆಲ್, ಪೆಟ್ರೋಲ್ ಗಿಂತ ದುಬಾರಿಯಾಗಿದೆ. ವ್ಯಾಟ್ ಹೊರೆಯಿಂದಾಗಿ ಇಂಧನಗಳ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಸಾಗಾಣಿಕೆ ವೆಚ್ಚ ಪರಿಗಣಿಸಿ ಚಿಲ್ಲರೆ ಮಾರಾಟ ದರವು ಕೆಲ ಪೈಸೆಗಳಲ್ಲಿ ವ್ಯತ್ಯಾಸ ಹೊಂದಿರುತ್ತದೆ.

LEAVE A REPLY

Please enter your comment!
Please enter your name here