ಗೋರಕ್ಷಣೆಗಾಗಿ ದೇಶದಲ್ಲಿ ಕಠಿಣ ಕಾನೂನನ್ನು ಪ್ರಧಾನಿ ಮೋದಿ ತರಬೇಕು: ಪೇಜಾವರ ಶ್ರೀ

0
168

ನ್ಯೂಸ್ ಕನ್ನಡ ವರದಿ: (02.06.19) ಮೊನ್ನೆ ತಾನೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸರಕಾರ ಕೂಡಲೇ ಮಾಡಬೇಕು ಎಂದು ಆಗ್ರಹಿಸಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಇದೀಗ ಗೋರಕ್ಷಣೆಯ ಕುರಿತಾದಂತೆ ಮಾತನಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಿದೆ. ಯಾವ ಪಕ್ಷದ ಬೆಂಬಲವೂ ಈಗ ಬಿಜೆಪಿಗೆ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಇನ್ನಾದರೂ ಗೋ ರಕ್ಷಣೆಗೆ ಉತ್ತಮವಾದ ಕಾನೂನನ್ನು ತರಬೇಕು ಎಂದು ಅವರು ಮನವಿ ಮಾಡಿದರು.

ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ದೇಸಿ ಗೋವು ಸಮ್ಮೇಳನದಲ್ಲಿ ಮಾತನಾಡಿ, ಗೋವಿನ ಹಾಲು ಕುಡಿದವರಿಗೆ ಗೋವು ತಾಯಿಯಾಗಿದ್ದು, ಗೋವನ್ನು ಕೊಲ್ಲುವವನು ಮಾನವನೇ ಅಲ್ಲ. ಗೋವು ಕೊಲ್ಲುವವನು ರಕ್ಕಸನ ಸಮಾನ. ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯ ಕೃತ್ಯವಾಗಿದ್ದು, ಧಾರ್ಮಿಕ ದೃಷ್ಟಿಗಿಂತ, ಮಾನವೀಯ ದೃಷ್ಟಿಯಿಂದಾದರೂ ಗೋರಕ್ಷಣೆ ಮಾಡಬೇಕಿದೆ ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here