ಕೊರೋನ ‘ಪತಂಜಲಿ’ ಔಷಧಕ್ಕೆ ಬ್ರೇಕ್ ಹಾಕಿದ ಆಯುಷ್ ಸಚಿವಾಲಯ..!

0
61

ನ್ಯೂಸ್ ಕನ್ನಡ ವರದಿ: ಕೋವಿಡ್‌-19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಪರಿಶೀಲನೆಯವರೆಗೂ ಈ ಉತ್ಪನ್ನ ಕುರಿತು ಜಾಹೀರಾತು ನೀಡಬಾರದು’ ಎಂದು ಆಯುಷ್‌ ಸಚಿವಾಲಯ ತಾಕೀತು ಮಾಡಿದೆ.

ಕೊರೊನಿಲ್‌ ಮತ್ತು ಸ್ವಸರಿ ಔಷಧ ಬಿಡುಗಡೆ ಮಾಡಿದ್ದ ಪತಂಜಲಿ, ಇದು ಕೋವಿಡ್ ಗುಣಪಡಿಸಲಿದೆ ಎಂದು ಹೇಳಿತ್ತು. ಆದರೆ ಸಚಿವಾಲಯ, ‘ಈ ಪ್ರತಿಪಾದನೆಯ ಹಿಂದಿನ ವಿವರ ಹಾಗೂ ವೈಜ್ಞಾನಿಕ ಅಧ್ಯಯನದ ಮಾಹಿತಿ ಇಲ್ಲ’ ಎಂದು ಹೇಳಿದೆ.

ಔಷಧದ ಪ್ರಯೋಗ ನಡೆದ ಆಸ್ಪತ್ರೆ, ಸ್ಥಳ, ಬಳಸಲಾದ ಔಷಧದ ಪ್ರಮಾಣ ಕುರಿತ ವಿವರಗಳನ್ನು ಒದಗಿಸಬೇಕು ಎಂದು ಸಚಿವಾಲಯವು ಪತಂಜಲಿ ಸಂಸ್ಥೆಗೆ ಸೂಚಿಸಿದೆ.

ಕೊರೊನಾ ಸೋಂಕುಗೆ ಚಿಕಿತ್ಸೆ ನೀಡಬಲ್ಲ ಆಯುರ್ವೇದ ಔಷಧಿಯನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಯೋಗ ಗುರು ರಾಮದೇವ್ ನೇತೃತ್ವದ ಪತಂಜಲಿ ಸಂಸ್ಥೆ ಹೇಳಿಕೊಂಡಿದೆ.

ಪತಂಜಲಿ ಸಂಶೋಧನಾ ಸಂಸ್ಥೆ ಮತ್ತು ಜೈಪುರ ಮೂಲಕ ರಾಷ್ಟ್ರೀಯ ವೈದ್ಯ ವಿಜ್ಞಾನ ಸಂಸ್ಥೆ (ನಿಮ್ಸ್) ಪಾಲುದಾರಿಕೆಯಡಿ ಸಂಶೋಧನೆ ನಡೆದಿತ್ತು.

‘ಸುಮಾರು 280 ಕೊರೊನಾ ಸೋಂಕಿತರ ಮೇಲೆ ಇದನ್ನು ಪ್ರಯೋಗಿಸಲಾಗಿತ್ತು. ಮೂರು ದಿನದಲ್ಲಿ ಶೇ 69ರಷ್ಟು ಚೇತರಿಕೆ ಕಂಡುಬಂದಿತು’ ಎಂದೂ ರಾಮ್‌ ದೇವ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿಮ್ಸ್‌ ನಿರ್ದೇಶಕ ಡಾ.ಬಲಬೀರ್‌ ಸಿಂಗ್ ತೋಮರ್‌ ಹಾಗೂ ಸಂಶೋಧನೆಯಲ್ಲಿ ಭಾಗಿಯಾಗಿದ್ದ ಅಲೋಪಥಿ ಮತ್ತು ಆರ್ಯುವೇದ ಪರಿಣತರು ಹಾಜರಿದ್ದರು.

LEAVE A REPLY

Please enter your comment!
Please enter your name here