ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರ ದಾಳಿ: ಐದು ಜನ ಸಾವು

0
26
Police officers survey a damaged car at the site of an attack at the Pakistan Stock Exchange entrance in Karachi June 29, 2020. REUTERS/Akhtar Soomro

ನ್ಯೂಸ್ ಕನ್ನಡ ವರದಿ: ಕರಾಚಿಯಲ್ಲಿರುವ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡಕ್ಕೆ ಸೋಮವಾರ ಮುಂಜಾನೆ ಭಯೋತ್ಪಾದಕರ ಗುಂಪೊಂದು ನುಗ್ಗಿ ದಾಳಿ ನಡೆಸಿತು. ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.

ಆರಂಭಿಕ ವರದಿಗಳ ಪ್ರಕಾರ ಇಬ್ಬರು ಭಯೋತ್ಪಾದಕರು ಸಹ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನದ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದೊಳಗೆ ಭಯೋತ್ಪಾದಕರು ಇನ್ನೂ ಇದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದೆ.

LEAVE A REPLY

Please enter your comment!
Please enter your name here