ಪಾಕಿಸ್ತಾನದ ಈ ಅಭಿಮಾನಿಗೆ ಪಂದ್ಯ ವೀಕ್ಷಿಸಲು ಟಿಕೆಟ್ ಕೊಡುತ್ತಿದ್ದಾರೆ ಧೋನಿ! ಏಕೆ ಗೊತ್ತೇ?

0
728

ನ್ಯೂಸ್ ಕನ್ನಡ ವರದಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಭರದಿಂದ ಸಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಈ ಮದ್ಯೆ ಒಂದು ರೋಚಕ ಸಂಗತಿ ಹೊರಬಿದ್ದಿದೆ. ಭಾರತದಲ್ಲಿ ಕ್ರಿಕೆಟ್​ ಅನ್ನು ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಇದೇ ರೀತಿ ಪಾಕಿಸ್ತಾನದಲ್ಲಿ, ಭಾರತದ ಅದರಲ್ಲು ಎಂ ಎಸ್ ಧೋನಿ ಅವರ ಓರ್ವ ಕಟ್ಟಾ​ ಅಭಿಮಾನಿ ಇದ್ದಾರೆ. ಇವರ ಹೆಸರು ಬಷೀರ್. ಎಲ್ಲರೂ ಪ್ರೀತಿಯಿಂದ ಚಾಚಾ ಎಂದೇ ಕರೆಯುತ್ತಾರೆ. ಪಾಕಿಸ್ತಾನ ತಂಡ ಎಲ್ಲಿಯೇ ಆಟವಾಡಿದರೂ ಬಷೀರ್​ ಚಾಚಾ ಅಲ್ಲಿ ಹಾಜರಿ ಇರುತ್ತಾರೆ.

ನಾಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕಾಗಿ ಸ್ವತಃ ಎಂ ಎಸ್ ಧೋನಿ ಅವರೇ ಬಷೀರ್​​ಗೆ ಟಿಕೆಟ್ ನೀಡುತ್ತಿದ್ದಾರೆ. ಧೋನಿ ಅವರು ಬಷೀರ್​ಗೆ ಪಂದ್ಯ ವೀಕ್ಷಿಸಲು ಟಿಕೆಟ್ ನೀಡುತ್ತಿರುವುದು ಇದು ಮೊದಲೇನಲ್ಲ. 2011ರ ವಿಶ್ವಕಪ್​​ನಿಂದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಎಲ್ಲಿ ನಡೆಯುತ್ತದೊ ಆ ಎಲ್ಲಾ ಪಂದ್ಯಗಳಿಗೆ ಧೋನಿ ಟಿಕೆಟ್ ನೀಡುತ್ತಾ ಬಂದಿದ್ದಾರೆ ಎಂದರೆ ನಂಬಲೇ ಬೇಕು.

2011ರ ವಿಶ್ವಕಪ್​ ಸೆಮಿ ಫೈನಲ್ ಪಂದ್ಯದಲ್ಲಿ ಬಷೀರ್​ ಅವರು ಮೊಹಾಲಿಗೆ ಆಗಮಿಸಿ, ಟಿಕೆಟ್ ಸಿಗದೇ ನನಗೆ ಯಾರಾದರೂ ಟಿಕೆಟ್ ಕೊಡಿಸಿ ಎಂಬ ಬೋರ್ಡ್ ಕೈಯಲ್ಲಿ ಹಿಡಿದು ನಿಂತಾಗ, ದೋನಿ ಒಬ್ಬ ಹುಡುಗನ ಕೈಯಲ್ಲಿ ಟಿಕೆಟ್ ನೀಡಿ ಕಳುಹಿಸಿದ್ದರು, ಅಂದು ಧೋನಿಗೆ ಬೆಂಬಲ ನೀಡಿ ಗಮನಸೆಳೆದಿದ್ದರು. ಇಲ್ಲಿಂದ ಧೋನಿ ಹಾಗೂ ಬಷೀರ್ ನಡುವೆ ಬಾಂಧವ್ಯ ಗಟ್ಟಿಯಾಗಿದೆ. ಅದು ಇಂದಿಗೂ ಮುಂದುವರಿದಿದೆ.

ಈ ಬಗ್ಗೆ ಮಾತನಾಡಿದ ಬಷೀರ್ ಚಾಚಾ, ‘ಜೂನ್ 13 ರಂದು ಇಂಗ್ಲೆಂಡ್​ಗೆ ತಲುಪಿದೆ. ಪಂದ್ಯ ವೀಕ್ಷಣೆಗೆ ಸುಮಾರು 70 ಸಾವಿರ ರೂ. ಕೊಟ್ಟು ಒಂದು ಟಿಕೆಟ್ ಖರೀದಿಸಬೇಕು. ನನ್ನಲ್ಲಿ ಅಷ್ಟೊಂದು ಹಣವಿಲ್ಲ. ಆದರೆ ಟಿಕೆಟ್‌ಗಾಗಿ ನಾನು ಪರದಾಡುವಂತಿಲ್ಲ. ಧೋನಿ ನನಗೆ ಟಿಕೆಟ್ ತೆಗೆದು ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು. ಧೋನಿ ಈಗ ತುಂಬಾನೇ ಬ್ಯುಸಿ ಇರುತ್ತಾರೆ, ಹಾಗಾಗಿ ಕರೆ ಮಾಡಿಲ್ಲ. ಆದರೆ ಮೆಸೇಜ್ ಮೂಲಕ ಸಂಪರ್ಕದಲ್ಲಿದ್ದೇನೆ’ ಎಂದಿದ್ದಾರೆ.

LEAVE A REPLY

Please enter your comment!
Please enter your name here