ಓದುಗರ ಗಮನಕ್ಕೆ: ನ್ಯೂಸ್ ಕನ್ನಡ ಅಧಿಕೃತ ಫೇಸ್ಬುಕ್ ಪೇಜ್ ಅನ್ನು ಹ್ಯಾಕ್ ಮಾಡಲಾಗಿದೆ..!

0
29

ನ್ಯೂಸ್ ಕನ್ನಡ.ಇನ್ ಕಳೆದ ನಾಲ್ಕೈದು ವರ್ಷಗಳಿಂದ ಓದುಗರಿಗೆ ವಸ್ತುನಿಷ್ಠವಾದ ಸುದ್ದಿಯನ್ನು ಪ್ರಕಟಿಸುತ್ತಿದ್ದು, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಮುಂದುವರಿಯುತ್ತಿತ್ತು. ಆದರೆ ಕಳೆದ ಹಲವಾರು ತಿಂಗಳುಗಳಿಂದ ಫೇಸ್ಬುಕ್ ಪೇಜ್ ಗೆ ಮಾಸ್ ರಿಪೋರ್ಟ್ ಮಾಡುವುದು ಸೇರಿದಂತೆ ಹಲವಾರು ವಿರೋಧಿ ಕೃತ್ಯಗಳು ನಡೆಯುತ್ತಿತ್ತು. ಇದೀಗ ಕಳೆದ ನಾಲ್ಕು ದಿನಗಳಿಂದ ಫೇಸ್ಬುಕ್ ಪೇಜ್ ಅನ್ನು ಹ್ಯಾಕ್ ಮಾಡಲಾಗಿದೆ.

ಪೇಜ್ ನಲ್ಲಿದ್ದ ಎಲ್ಲಾ ಅಡ್ಮಿನ್ ಗಳನ್ನು ರಿಮೂವ್ ಮಾಡಲಾಗಿದ್ದು, ಸದ್ಯ ಪೇಜ್ ನಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಪೇಜ್ ನಲ್ಲಿ ಬರುತ್ತಿರುವ ಪೋಸ್ಟ್ ಗಳಿಗೂ ನ್ಯೂಸ್ ಕನ್ನಡ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಈಗಾಗಲೇ ಫೇಸ್ ಬುಕ್ ಗೆ ಮತ್ತು ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ. ಓದುಗರು ಸಹಕರಿಸಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here