ವಲಸಿಗರ ಬದಲು, ಭಾರತದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿ: ಪ್ರಧಾನಿ ಮೋದಿಗೆ ಓವೈಸಿ ಸಲಹೆ

0
17

ನ್ಯೂಸ್ ಕನ್ನಡ ವರದಿ: ಸಿಎಎ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು, ನೆರೆ ರಾಷ್ಚ್ರದ ವಲಸಿಗರ ಬದಲಾಗಿ ದೇಶದಲ್ಲಿರುವ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಮೊದಲು ರಕ್ಷಣೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದಾರೆ.

ಪೆದ್ದಪಲ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಓವೈಸಿ, ಪೌರತ್ವ ತಿದ್ದುಪಡಿ ಕಾಯ್ದೆ ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿತ್ತು. ನಿಮಗೆ ಮತ ಹಾಕಿದವರು ಭಾರತೀಯರು, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಜನರಲ್ಲ.

ಸಿಎಎ ಕೇವಲ ಮುಸ್ಲಿಮರ ವಿರುದ್ದ ಅಲ್ಲ ದಲಿತರ ವಿರುದ್ಧವಾಗಿಯೂ ಇದೆ. ದೇಶದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಇಲ್ಲ ಎಂದು ಹೇಳುತ್ತಾರೆ ಮೋದಿ. ಆದರೆ, ಧರ್ಮದ ಗೆರೆ ಎಳೆದು ಜನರನ್ನು ಇಬ್ಭಾಗ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here