ಕಾಂಗ್ರೆಸ್‌ ದುರ್ಬಲವಾಗಿದೆ, ಅದರಿಂದ ಮುಸ್ಲಿಮರಿಗೇನು ಪ್ರಯೋಜನ ಇಲ್ಲ: ಅಸಾಸುದ್ದೀನ್ ಒವೈಸಿ

0
897

ನ್ಯೂಸ್ ಕನ್ನಡ ವರದಿ (12-6-2019): ಹೈದರಾಬಾದ್ ಸಂಸದ ಅಸಾಸುದ್ದೀನ್ ಒವೈಸಿ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮುಸ್ಮಿಮರ ಮತಗಳಿಂದ ಗೆದ್ದಿದ್ದಾರೆ. ವಯನಾಡಿನಲ್ಲಿ 40 ಪ್ರತಿಶತ ಮುಸ್ಲಿಮರಿದ್ದಾರೆ. ಹಾಗಾಗಿಯೇ ಅವರು ಅಲ್ಲಿ ಗೆದ್ದಿದ್ದಾರೆ ಎಂದು ಹೇಳಿದ್ದ ಒವೈಸಿ, ಈಗ ದೇಶದಲ್ಲಿ ರಾಕೀಯವಾಗಿ ದುರ್ಬಲಗೊಂಡಿರುವ ಕಾಂಗ್ರೆಸ್‌ ಪಕ್ಷದಿಂದ ಮುಸ್ಲಿಂರಿಗೆ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.

ರಾಜಕೀಯವಾಗಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿದೆ, ಅದಕ್ಕೆ ಮತ ನೀಡುವ ಮುನ್ನಾ ಮುಸ್ಲೀಮರು ಯೋಚನೆ ಮಾಡಬೇಕು ಎಂದು ಅಸಾದುದ್ದೀನ್ ಒವೈಸಿ ಅವರು ಹೇಳಿದರು. ನಾವು ಹಾಕುವ ಮತ ಎಲ್ಲಿ ಹೋಗುತ್ತಿದೆ? ಏನಾಗುತ್ತಿದೆ? ಎಂದು ಚಿಂತಿಸಲು ಮುಸಲ್ಮಾನರಿಗೆ ಇದು ಸಕಾಲ, ಕಾಂಗ್ರೆಸ್ ಈಗ ಮೊದಲಿನಂತಿಲ್ಲ ಅದು ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಮುಸಲ್ಮಾನರು ಕಾಂಗ್ರೆಸ್ ಮತ್ತು ಇತರ ಜಾತ್ಯಾತೀತ ಪಕ್ಷಗಳನ್ನು ಬಿಡಲು ಸಿದ್ಧರಿಲ್ಲ ಆದರೆ ಆ ಪಕ್ಷಗಳು ಜನರ ಆಶಯಗಳನ್ನು ಈಡೇರಿಸಲು ಸಿದ್ಧವಿಲ್ಲ ಎಂದು ಒವೈಸಿ ಅವರು ಜಾತ್ಯಾತೀತ ಪಕ್ಷಗಳನ್ನು ಟೀಕಿಸಿದರು. ಒವೈಸಿಯವರು ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here