ಒಮನ್ ದೊರೆ ನಿಧನದ ಹಿನ್ನೆಲೆ ಒಂದು ದಿನದ ಶೋಕಾಚರಣೆ ಘೋಷಿಸಿದ ಭಾರತ ಸರ್ಕಾರ: ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಕೆ!

0
97

ನ್ಯೂಸ್ ಕನ್ನಡ ವರದಿ: ಅರಬ್ ಜಗತ್ತಿನ ಸುಧೀರ್ಘ ಅವಧಿಯ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಒಮಾನ್ ಸುಲ್ತಾನ್ ಖಬೂಸ್ ಬಿನ್ ಸೈಯದ್ (79) ಜನವರಿ 10ರಂದು ನಿಧನರಾದರು. “ತೀವ್ರ ಶೋಕ ಮತ್ತು ವಿಷಾದದಿಂದ ಶುಕ್ರವಾರ ಕೊನೆಯುಸಿರೆಳೆದ ಸುಲ್ತಾನ್ ಖಬೂಸ್ ಬಿನ್ ಸೈಯದ್ ಅವರಿಗೆ ಆಸ್ಥಾನ ಶೋಕ ವ್ಯಕ್ತಪಡಿಸುತ್ತದೆ” ಎಂದು ಅರಮನೆಯ ಪ್ರಕಟಣೆ ಹೇಳಿದೆ. ಸುಲ್ತಾನ್ ಖಬೂಸ್ ಬಿನ್ ಸೈಯದ್ ಅವರ ನಿಧನದ ಹಿನ್ನಲೆ ಭಾರತ ಸರ್ಕಾರ ಸೋಮವಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ.

ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಜನವರಿ 13 ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ನಡೆಯುವುದು ಮತ್ತು ಭಾರತದಾದ್ಯಂತ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಸಲಾಗುವುದು ಹಾಗೂ ಆ ದಿಮ ಯಾವುದೆ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದುಲ್ಲ ಎಂದು ಗೃಹಸಚಿವಾಲಯ ತಿಳಿಸಿದೆ.

ಈ ಕುರಿತಂತೆ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಕಳುಹಿಸಿದೆ.

LEAVE A REPLY

Please enter your comment!
Please enter your name here