ಪ್ರತಿ ಅನಿವಾಸಿ ಕನ್ನಡಿಗನೂ ತಿಳಿಯಲೇಬೇಕಾದ ‘NRK ಕಾರ್ಡ್’ ಬಗ್ಗೆ ಸಂಪೂರ್ಣ ಮಾಹಿತಿ! ವೀಡಿಯೋ ವೀಕ್ಷಿಸಿ

0
1484

ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಪ್ರಪಂಚದಾದ್ಯಂತ ಇರುವ ಅನಿವಾಸಿ ಕನ್ನಡಿಗರಿಗೆ ನೋಂದಣಿ ಮತ್ತು ವಿಶೇಷ ಗುರುತಿನ ಚೀಟಿಯನ್ನು (NRK Card) ನೀಡುವ ವ್ಯವಸ್ಥೆಯನ್ನು ಜಾರಿ ಗೊಳಿಸಿದೆ.

ಈ NRK ಕಾರ್ಡ್ ಕುರಿತು ಯುಎಇಯಲ್ಲಿರುವ ಪ್ರತಿಯೊಬ್ಬ ಅನಿವಾಸಿ ಕನ್ನಡಿಗರಿಗೂ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಯುಎಇ ಘಟಕದ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಪ್ರಭಾಕರ್ ಅಂಬಲ್ತೆರೆ ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಸಾಧ್ಯವಾದಷ್ಟು ಪ್ರತಿ ಅನಿವಾಸಿ ಕನ್ನಡಿಗನಿಗೂ ತಲುಪಿಸಲು ಪ್ರಯತ್ನಿಸಿ..

ಈಗಾಗಲೇ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಘಟಕದ ವತಿಯಿಂದ ಯುಎಇಯಲ್ಲಿ ಸಕ್ರಿಯವಾಗಿ NRK ಕಾರ್ಡ್ ನೊಂದಾವಣಿ ಪ್ರಾರಂಭವಾಗಿದ್ದು, ಈ ಕಾರ್ಡ್  ನೊಂದಾವಣೆ ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬ ಅನಿವಾಸಿ ಕನ್ನಡಿಗನೂ ಮಾಡಬಹುದಾಗಿದೆ ಮತ್ತು ಆ ಮೂಲಕ ಕರ್ನಾಟಕ ಸರಕಾರ ಅನಿವಾಸಿ ಕನ್ನಡಿಗರಿಗೆ ನೀಡಿರುವ ಸೌಲಭ್ಯ ಸವಲತ್ತುಗಳನ್ನು ಪಡೆಯಬಹುದು..

ತಪ್ಪದೇ ವೀಡಿಯೋ ವೀಕ್ಷಿಸಿ..

LEAVE A REPLY

Please enter your comment!
Please enter your name here