ಕೊರೊನಾ ಲಾಕ್‌ಡೌನ್‌: 1,70,000 ಕೋಟಿ ಪ್ಯಾಕೇಜ್‌ ಘೋಷಿಸಿದ ನಿರ್ಮಲ ಸೀತಾರಾಮನ್

0
28

ನ್ಯೂಸ್ ಕನ್ನಡ ವರದಿ: ಕರೋನ ವೈರಸ್ ಹರಡುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ದೇಶವು 21 ದಿನಗಳ ಲಾಕ್‌ಡೌನ್‌ನ 2 ನೇ ದಿನವನ್ನು ಪ್ರವೇಶಿಸುತ್ತಿದ್ದಂತೆ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಆರ್ಥಿಕ ಪ್ಯಾಕೇಜ್‌ ಅನ್ನು ಪ್ರಕಟಣೆ ಮಾಡಿದ್ದಾರೆ. ಈ ಬಗ್ಗೆ ಸಚಿವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತ ಲಾಕ್‌ಡೌನ್‌ ಬಗ್ಗೆ ಪ್ರಧಾನಿ ಮೋದಿಯವರು ಮಾಹಿತಿ ನೀಡಿದ ನಂತರ ಕೇಂದ್ರ ಸರಕಾರ ಬಹುಮುಖ್ಯವಾಗಿ ಮಹಿಳೆ ಹಾಗೂ ದಿನಗೂಲಿ ಕಾರ್ಮಿಕರ ಬಗ್ಗೆ ಕೂಡ ಗಮನ ಹರಿಸಲಾಗಿದೆ ಅಂತ ಹೇಳಿದರು. ಇದೇ ವೇಳೆ ಅವರು ವಲಸೆ ಕಾರ್ಮಿಕರು, ಮಹಿಳೆಯರಿಗೆ ಹಾಗು ದಿನಗೂಲಿ ಕಾರ್ಮಿಕರಿಗೆ ಗರೀಬ್‌ ಕಲ್ಯಾಣ ಯೋಜನೆಯಲ್ಲಿ ಒಂದು ಲಕ್ಷದ 70 ಸಾವಿರ ಕೋಟಿಯನ್ನು ಮೀಸಲು ಮಾಡಲಾಗಿದೆ ಅಂತ ಹೇಳಿದರು.

ಇನ್ನು ಇದೇ ವೇಳೆ ಅವರು ಮಾತನಾಡಿ, ವೈದ್ಯರು, ನರ್ಸ್‌ ಸೇರಿದಂತೆ ಕೋರಾನ ವೈರಸ್‌ ವಿರುದ್ದ ಹೋರಾಡುತ್ತಿರುವರಿಗಾಗಿ 50 ಲಕ್ಷ ಆರೋಗ್ಯ ವಿಮೆ ಜಾರಿಗೆ ಗೊಳಿಸಲಾಗಿದೆ ಅಂತ ಹೇಳಿದರು.

ಪ್ರತಿ ಯಾರಾದರೂ ಹಸಿವಿನಿಂದ ಇರಬೇಕೆಂದು ನಾವು ಬಯಸುವುದಿಲ್ಲ ಹೀಗಾಗಿ ಪ್ರತಿಯೊಬ್ಬರಿಗೆ ಮುಂದಿನ 3 ತಿಂಗಳು 5 ಕೆಜಿ ಅಕ್ಕಿ ಅಥಾವ ಗೋಧಿಯನ್ನು, ಇದರೊಂದಿಗೆ ಬೇಳೆ ಉಚಿತವಾಗಿ ನೀಡಲಾಗುವುದು ಅಂತ ಹೇಳಿದರು. ಈ ಯೋಜನೆಯಿಂದ ದೇಶದ 80 ಕೋಟಿ ಜನತೆ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಅಂತ ಹೇಳಿದರು.

ಪ್ರತಿಯೊಬ್ಬ ಎಂಎನ್‌ಆರ್‌ಇಜಿಎ ಕೆಲಸಗಾರನಿಗೆ ₹ 2,000 ಹೆಚ್ಚಳ.

ಮಹಿಳಾ ಜನ ಧನ್ ಖಾತೆ ಹೊಂದಿರುವವರಿಗೆ ಮನೆ ನಡೆಸಲು 3 ತಿಂಗಳವರೆಗೆ₹ 500 ಎಕ್ಸ್ ಗ್ರೇಟಿಯಾ.

8.69 ಕೋಟಿ ರೈತರಿಗೆ ನೇರ ನಗದು ವರ್ಗಾವಣೆಯ ಮೂಲಕ ₹ 2000 ರ ಹಣ ವರ್ಗಾವಣೆ, ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಕಂತು‌

3 ಕೋಟಿ ಬಡ ಹಿರಿಯ ನಾಗರಿಕ, ಬಡ ವಿಧವೆಯರು ಮತ್ತು ಬಡ ಅಂಗವಿಕಲರಿಗೆ ₹1,000 ಪಿಂಚಣಿ.

ಉಜ್ಜಾವಲಾ ಯೋಜನೆಯಡಿ ಮಹಿಳೆಯರಿಗೆ 3 ತಿಂಗಳವರೆಗೆ ಉಚಿತ ಸಿಲಿಂಡರ್‌.

ಮುಂದಿನ ತಿಂಗಳು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಇಪಿಎಫ್ ಕೊಡುಗೆ.

63 ಲಕ್ಷ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹ 20 ಲಕ್ಷದ ತನಕ ಸಾಲ.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ, 3.5 ಕೋಟಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಪರಿಹಾರ ಒದಗಿಸಲು ನಿಧಿಯನ್ನು (31,000 ಕೋಟಿ ರೂ.) ಬಳಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.

ವೈದ್ಯಕೀಯ ಪರೀಕ್ಷೆ ಮತ್ತು ತಪಾಸಣೆ ಮತ್ತು ಆರೋಗ್ಯದ ಗಮನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಬಳಿ ಇರುವ 31 ಸಾವಿರ ಕೋಟಿ ಹಣವನ್ನು ಬಳಕೆಗೆ ಮನವಿ.

ಇನ್ನು ಸೀತಾರಾಮನ್ ಮಂಗಳವಾರ ಆದಾಯ ತೆರಿಗೆ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಿದ್ದರು, ಇದಲ್ಲದೇ ಇತರ ಬ್ಯಾಂಕುಗಳ ಎಟಿಎಂನಿಂದ ಹಣವನ್ನು ಹಿಂಪಡೆಯುವ ಶುಲ್ಕವನ್ನು ಮನ್ನಾ ಮಾಡಿದರು.

LEAVE A REPLY

Please enter your comment!
Please enter your name here