ದೇಶ ಬಿಟ್ಟು ಪರಾರಿಯಾಗಿದ್ದ ನಿತ್ಯಾನಂದನಿಂದ ಹೊಸ ದೇಶ ಸ್ಥಾಪನೆ!; ದೇಶದ ಹೆಸರು ಹಿಂದೂ ರಾಷ್ಟ್ರವಂತೆ!

0
942

ನ್ಯೂಸ್ ಕನ್ನಡ ವರದಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಕ್ರಮವಾಗಿ ದೇಶದಿಂದ ಪರಾರಿಯಾಗಿದ್ದಾನೆಂಬ ಮಾಹಿತಿ ಬೆನ್ನಲ್ಲೇ ಆತನ ಕುರಿತು ಹತ್ತು ಹಲವು ವಿಷಯಗಳು ಬಯಲಾಗುತ್ತಿವೆ. ಈಗ ನಿತ್ಯಾನಂದ ದ್ವೀಪವೊಂದನ್ನು ಖರೀದಿಸಿ ಅದರಲ್ಲಿ ತನ್ನದೇ ದೇಶ ಕಟ್ಟಿದ್ದಾನೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಈಕ್ವೇಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ.

ಅಲ್ಲದೆ ಇದಕ್ಕಾಗಿ ಈಗಾಗಲೇ ಕೈಲಾಸ ಎಂಬ ಹೆಸರಿಟ್ಟಿದ್ದು, ಇದಕ್ಕೆ ಧ್ವಜ, ಲಾಂಛನ,ಪಾಸ್ ಪೋರ್ಟ್ ಗಳನ್ನು ಸಹ ಸಿದ್ದಪಡಿಸಿದ್ದಾನೆ. ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಸಮೀಪವಿದ್ದು, ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ನಿತ್ಯಾನಂದ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದಾನೆ.

ದೇಣಿಗೆ ಸಂಗ್ರಹಿಸಲು ನಿತ್ಯಾನಂದ ಒಂದು ಪ್ರತ್ಯೇಕ ವೆಬ್ ಸೈಟ್ ಕೂಡ ತೆರೆದಿದ್ದು, ಇದರಲ್ಲಿ ಕೈಲಾಸ ಕುರಿತು ಸುದೀರ್ಘ ವಿವರಣೆ ನೀಡಿದ್ದಾನೆ. ಕೈಲಾಸದ ಪಾಸ್‍ಪೋರ್ಟಿನ ಎರಡು ಮಾದರಿಗಳು ಅಂತಿಮವಾಗಿದೆ. ಇನ್ನು ಕೈಲಾಸ ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ. ನಿತ್ಯಾನಂದ ಸಚಿವ ಸಂಪುಟವನ್ನು ಸಹ ರಚಿಸಿದ್ದು, ಮಾ ಎಂಬ ಹೆಸರಿನವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾನೆಂದು ಕೆಲವು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

LEAVE A REPLY

Please enter your comment!
Please enter your name here