ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹ್ಮದ್ ನಿಧನ!

0
73

ನ್ಯೂಸ್ ಕನ್ನಡ ವರದಿ: (03.05.2020): ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ಸಿರಿ ಬಳುಕಿನಲ್ಲಿ ಎಂಬ ನಾಡಿನ ವರ್ಣನೆಯನ್ನು ಅತ್ಯುತ್ತಮವಾಗಿ ಬಿಂಬಿಸುವ ಕವಿತೆಯೊಂದಿಗೆ ದೇಶಾದ್ಯಂತ ಪ್ರಸಿದ್ಧರಾಗಿದ್ದ ಕವಿ ಕೆ.ಎಸ್. ನಿಸಾರ್ ಅಹ್ಮದ್ ಇಂದು ತಮ್ಮ ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

1936 ಫೆಬ್ರವರಿ ಐದರಂದು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಜನಿಸಿದ್ದ ನಿಸಾರ್ ಅಹ್ಮದ್ ತಮ್ಮ ಅತ್ಯುತ್ತಮ ಕವನಗಳು ಹಾಗೂ ಕೃತಿಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಮನಸು ಗಾಂಧಿ ಬಜಾರು, ನೆನದವರ ಮನದಲ್ಲಿ, ಸುಮುಹೂರ್ತ, ನವೋಲ್ಲಾಸ ಮುಂತಾದ ಕವನ ಸಂಕಲನಗಳನ್ನು ಹಾಗೂ ಹಲವಾರು ಕೃತಿಗಳನ್ನು ನಿಸಾರ್ ಅಹ್ಮದ್ ರಚಿಸಿದ್ದಾರೆ.

LEAVE A REPLY

Please enter your comment!
Please enter your name here