‘ನಿಖಿಲ್ ಎಲ್ಲಿದ್ದೀಯಪ್ಪಾ’; ಸಿಎಂ ಮುಂದೇನೆ ಪೇಚಿಗೆ ಸಿಲುಕಿದ ಅರ್ಚಕ!

0
174

ನ್ಯೂಸ್ ಕನ್ನಡ ವರದಿ (15.5.19): ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗಿತ್ತು. ಈಗ ಸಿಎಂ ಮುಂದೇನೆ ಪೇಚಿನ ವಾತಾವರಣ ಸೃಷ್ಟಯಾಗಿತ್ತು. ನಿನ್ನೆ ಕಲಬುರಗಿಯ ಅಫ್ಜಲ್ ಪುರ ತಾಲ್ಲೂಕಿನ ದೇವಳ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಪೂಜೆ ಸಲ್ಲಿಸಲು ಹೋಗಿದ್ದರು. ಆಗ ಅರ್ಚಕರೊಬ್ಬರು ಸ್ವತಃ ಕುಮಾರಸ್ವಾಮಿ ಮುಂದೆಯೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಬಿಟ್ಟಿದ್ದಾರೆ.

ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಅಚಾನಕ್ಕಾಗಿ ‘ನಿಖಿಲ್ ಎಲ್ಲಿದ್ದೀಯ’ ಎಂದು ಕರೆದಿದ್ದಾರೆ, ಇದರಿಂದ ಕೆಲ ಕಾಲ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅರ್ಚಕ ದತ್ತಾತ್ರೆಯ ಅವರ ಮಗನ ಹೆಸರೂ ನಿಖಿಲ್ ಎಂದೇ ಆಗಿದ್ದು. ಆತ ಪೂಜೆಗೆ ಬೇಕಾದ ಸಾಮಗ್ರಿಯೊಂದನ್ನು ತರಲು ಹೋದವ, ಹಿಂದೆ ಸಿಲುಕಿಕೊಂಡಿದ್ದಾನೆ, ಅದಕ್ಕೆ ಅರ್ಚಕರು ದತ್ತಾತ್ರೆಯ ಅವರು ನಿಖಿಲ್ ಎಲ್ಲಿದ್ದೀಯಾ? ಎಂದು ಜೋರಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದನ್ನು ತಪ್ಪು ತಿಳಿದುಕೊಂಡ ಕುಮಾರಸ್ವಾಮಿ ಬೆಂಬಲಿಗರು ಅರ್ಚಕರ ಮೇಲೆ ರೇಗಿದ್ದಾರೆ, ಕೂಡಲೇ ಎಚ್ಚೆತ್ತುಕೊಂಡ ಅರ್ಚಕರು ಕುಮಾರಸ್ವಾಮಿ ಅವರಿಗೆ ಇರುವ ವಿಷಯವನ್ನು ವಿವರಿಸಿದ್ದಾರೆ. ತಮ್ಮ ಮಗನನ್ನು ಕರೆದು ಪರಿಚಯ ಮಾಡಿಸಿ, ಫೋಟೋ ಕೂಡಾ ತೆಗೆಸಿಕೊಂಡರು.

LEAVE A REPLY

Please enter your comment!
Please enter your name here