ವಿಶ್ವಸಂಸ್ಥೆಯ ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಭಾರತ ಮೂಲದ ನಿಕ್ಕಿ ಹ್ಯಾಲಿ!

0
144

ವಾಷಿಂಗ್ಟನ್​ ಡಿ.ಸಿ: ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿಕ್ಕಿ ಹ್ಯಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡಾ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಡೊನಾಲ್ಡ್​ ಟ್ರಂಪ್​ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿಕ್ಕಿಯವರು ರಾಜೀನಾಮೆ ನೀಡಲು ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.

2020ರ ಚುನಾವಣೆಯ ಪೂರ್ವತಯಾರಿ ಎಂದು ವರದಿಯಾಗುತ್ತಿದ್ದಂತೆ ಅದನ್ನು ಅಲ್ಲಗಳೆದು ನಿಕ್ಕಿ ಹ್ಯಾಲಿ 2020ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ಡೊನಾಲ್ಡ್​ ಟ್ರಂಪ್​ ಪರವಾಗಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಹಲವು ಮೂಲಗಳು ತಿಳಿಸಿವೆ.ಭಾರತೀಯ ಮೂಲಕ ನಿಕ್ಕಿ ಹ್ಯಾಲಿಯವರ ರಾಜೀನಾಮೆ ಸುದ್ದಿಯು ಟ್ರಂಪ್​ರವರ ಟ್ವೀಟ್​ ಬಳಿಕ ಸುದ್ದಿಗೆ ಬಂದಿದೆ. ಕಾರಣವನ್ನು ಇನ್ನೂ ಸರಿಯಾಗಿ ಯಾರೂ ತಿಳಿಸಿಲ್ಲ.

LEAVE A REPLY

Please enter your comment!
Please enter your name here